ಪುಲ್ವಾಮ ಉಗ್ರರ ದಾಳಿ ಪ್ರಕರಣ: ಮೃತ ಯೋಧರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ; ಸರಕಾರ

Update: 2019-07-17 16:01 GMT

ಹೊಸದಿಲ್ಲಿ, ಜು.17: ಪುಲ್ವಾಮದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದ ಯೋಧರ ಕುಟುಂಬಗಳಿಗೆ ಸುಮಾರು 1 ಕೋಟಿ ರೂ. ಮೊತ್ತದ ಪರಿಹಾರ ಹಾಗೂ ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಸರಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.

ಮೃತ ಯೋಧರ ಕುಟುಂಬಕ್ಕೆ ಒದಗಿಸಲಾದ ಪರಿಹಾರ ಮೊತ್ತದ ವಿವರ ಹೀಗಿದೆ: ಕೇಂದ್ರ ಸರಕಾರದ ಎಕ್ಸ್-ಗ್ರೇಷಿಯಾ ಪರಿಹಾರ 35 ಲಕ್ಷ ರೂ. ,ಕರ್ತವ್ಯದಲ್ಲಿದ್ದ ರಾಜ್ಯದ ಎಕ್ಸ್-ಗ್ರೇಷಿಯಾ ಪರಿಹಾರ 5 ಲಕ್ಷ ರೂ, ಸಿಆರ್‌ಪಿಎಫ್ ಆಪತ್ಕಾಲದ ನಿಧಿಯಿಂದ 20 ಲಕ್ಷ ರೂ, ಸಿಆರ್‌ಪಿಎಫ್ ಕೇಂದ್ರ ಕಲ್ಯಾಣ ನಿಧಿಯಿಂದ 1.5 ಲಕ್ಷ ರೂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ‘ಪ್ಯಾರಮಿಲಿಮಟರಿ ಸ್ಯಾಲರಿ ಪ್ಯಾಕೇಜ್ ಕವರ್’ ನಡಿ 30 ಲಕ್ಷ ರೂ. ಒದಗಿಸಲಾಗಿದೆ ಎಂದು ಗೃಹ ಸಚಿವಾಲಯದ ಸಹಾಯಕ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅನ್ವಯ ನಿಯಮದಂತೆ ಯೋಧರ ಕುಟುಂಬದವರು ತಮ್ಮ ತವರು ರಾಜ್ಯದಿಂದಲೂ ಪರಿಹಾರ ಪಡೆಯುತ್ತಾರೆ ಎಂದು ಹೇಳಿದರು.

ಪುಲ್ವಾಮಾದಲ್ಲಿ ಆತ್ಮಹತ್ಯಾ ದಾಳಿ ನಡೆಸಿದ್ದ ಐವರು ಉಗ್ರರಲ್ಲಿ ನಾಲ್ವರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಈ ತಿಂಗಳ ಆರಂಭದಲ್ಲಿ ಸಂಸತ್ತಿಗೆ ನೀಡಿದ ಉತ್ತರದಲ್ಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News