ಭಾರೀ ನೆರೆ: ಮನೆಗೆ ನುಗ್ಗಿ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆದ ಹುಲಿ!

Update: 2019-07-18 11:06 GMT

ಹೊಸದಿಲ್ಲಿ, ಜು.18: ಭಾರೀ ನೆರೆಯಿಂದ ತತ್ತರಿಸಿರುವ ಅಸ್ಸಾಂನ ಕಝಿರಂಗಾದಲ್ಲಿ ಮನೆಯೊಂದಕ್ಕೆ ನುಗ್ಗಿದ ಹುಲಿಯೊಂದು ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಫೋಟೊವೊಂದು ವೈರಲ್ ಆಗಿದೆ.

ವಿಶ್ವಪ್ರಸಿದ್ಧ ರಕ್ಷಿತಾರಣ್ಯವಿರುವ ಇಲ್ಲಿ ನೆರೆಯಿಂದ ಹಲವು ಪ್ರಾಣಿಗಳು ಸಾವನ್ನಪ್ಪಿವೆ. ಈ ಹುಲಿ ಕೂಡ ರಕ್ಷಿತಾರಣ್ಯದಲ್ಲಿ ಇತ್ತು ಎನ್ನಲಾಗಿದೆ. ಅಲ್ಲಿಂದ ಪರಾರಿಯಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಮನೆಯೊಂದಕ್ಕೆ ನುಗ್ಗಿದೆ.

ಹುಲಿ ಮನೆಗೆ ನುಗ್ಗುವುದನ್ನು ಕಂಡ ಮನೆಯ ಮಾಲಕ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಹುಲಿಯನ್ನು ಸುರಕ್ಷಿತವಾಗಿ ಹಿಡಿಯಲು ಕಾರ್ಯಾಚರಣೆ ನಡೆಯಲಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News