ಹಿಮಾ ದಾಸ್ ರನ್ನು ಅಭಿನಂದಿಸುವ ಟ್ವೀಟ್ ನಲ್ಲಿ ಎಡವಟ್ಟು ಮಾಡಿಕೊಂಡ ಜಗ್ಗಿ ವಾಸುದೇವ್!

Update: 2019-07-24 17:16 GMT
Photo: Indulge Express

ಹೊಸದಿಲ್ಲಿ, ಜು.24: ಒಂದೇ ತಿಂಗಳಲ್ಲಿ 5 ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಹಿಮಾ ದಾಸ್ ರನ್ನು ಅಭಿನಂದಿಸಲು ಟ್ವೀಟ್ ಮಾಡಿದ್ದ ಸದ್ಗುರು ಜಗ್ಗಿ ವಾಸುದೇವ್ ಎಡವಟ್ಟು ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಹಿಮಾ ದಾಸ್ 5 ಚಿನ್ನದ ಪದಕಗಳನ್ನು ಗಳಿಸಿ ಎಲ್ಲರ ಹುಬ್ಬೇರಿಸಿದ್ದರು. ಈ ಓಟಗಾರ್ತಿಯ ಸಾಧನೆಗೆ ದೇಶದ ಮೂಲೆ-ಮೂಲೆಗಳಿಂದಲೂ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ದೇಶದೆಲ್ಲೆಡೆಯ ಜನರು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಗಳಲ್ಲಿ ಹಿಮಾರನ್ನು ಪ್ರಶಂಸಿಸಿದರು. ಹಲವು ಸೆಲೆಬ್ರಿಟಿಗಳು ಟ್ವೀಟ್ ಮಾಡಿ ಹಿಮಾರನ್ನು ಹೊಗಳಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ್ದ ಜಗ್ಗಿ ವಾಸುದೇವ್, “ಹಿಮಾ ದಾಸ್, ಎ ಗೋಲ್ಡನ್ ಶವರ್ ಫಾರ್ ಇಂಡಿಯಾ. ಅಭಿನಂದನೆಗಳು ಮತ್ತು ಆಶೀರ್ವಾದಗಳು” ಎಂದು ಟ್ವೀಟ್ ಮಾಡಿದ್ದರು. ವಾಸುದೇವ್ ಈ ಟ್ವೀಟ್ ಪೋಸ್ಟ್ ಮಾಡುತ್ತಲೇ ಟ್ವಿಟರಿಗರು ಜಗ್ಗಿ ವಾಸುದೇವ್ ವಿರುದ್ಧ ಹರಿಹಾಯ್ದರು.

ಕಾರಣವೇನು?

ಜಗ್ಗಿ ವಾಸುದೇವ್ ಬಳಸಿದ್ದ ‘ಗೋಲ್ಡನ್ ಶವರ್’ ಎನ್ನುವ ಪದಗಳ ಬಗ್ಗೆ ಟ್ವಿಟರಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಪೋರ್ನೊಗ್ರಫಿ ಅಥವಾ ಅಶ್ಲೀಲ ಚಿತ್ರಗಳಲ್ಲಿ ಈ ಪದಗಳನ್ನು ಬಳಸಲಾಗುತ್ತದೆ. ಲೈಂಗಿಕ ವಿಕೃತಿಗಾಗಿ ಇನ್ನೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುವುದನ್ನು ಹೀಗೆನ್ನಲಾಗುತ್ತದೆ.

ಈ ಬಗ್ಗೆ ಟ್ವೀಟ್ ಮಾಡಿದ ಟ್ವಿಟರಿಗರೊಬ್ಬರು ‘ಗೋಲ್ಡನ್ ಶವರ್ ಎಂದರೆ ಏನೆಂದು ದಯವಿಟ್ಟು ಯಾರಾದರೂ ಅವರಿಗೆ ತಿಳಿಸಿಕೊಡಿ” ಎಂದಿದ್ದರೆ, ಮತ್ತೊಬ್ಬರು ‘ಡಿಕ್ಷನರಿ ಕೊಂಡುಕೊಳ್ಳಿ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News