×
Ad

ಸಾತ್ವಿಕ್‌ಸಾಯಿರಾಜ್ - ಚಿರಾಗ್ ಶೆಟ್ಟಿಗೆ ಜಯ

Update: 2019-07-24 23:17 IST

ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಇಂಗ್ಲೆಂಡ್‌ನ ಮಾರ್ಕಸ್ ಎಲ್ಲಿಸ್ ಹಾಗೂ ಕ್ರಿಸ್ ಲಾಂಗ್ರಿಡ್ಜ್ ವಿರುದ್ಧ 21-16, 21-17 ಗೇಮ್‌ಗಳ ಅಂತರದಿಂದ ಜಯ ದಾಖಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಸಾತ್ವಿಕ್‌ಸಾಯಿರಾಜ್-ಚಿರಾಗ್ ಮುಂದಿನ ಸುತ್ತಿನಲ್ಲಿ ಚೀನಾದ ಕ್ಸಿಯಾಂಗ್ ಹ್ವಾಂಗ್ ಹಾಗೂ ಚೆಂಗ್ ಲಿಯು ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಕೊರಿಯಾದ ಸೋ ಯೆಯೊಂಗ್ ಕಿಮ್ ಹಾಗೂ ಹೀ ಯಾಂಗ್ ಕಾಂಗ್ ಎದುರು 16-21, 14-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News