ನಿಖಾತ್, ದೀಪಕ್ ಸೆಮಿಗೆ ಲಗ್ಗೆ
ಹೊಸದಿಲ್ಲಿ, ಜು.24: ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಇಂಟರ್‌ನ್ಯಾಶನಲ್ ಟೂರ್ನಮೆಂಟ್‌ನಲ್ಲಿ ಭಾರತೀಯ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್(51 ಕೆಜಿ)ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ದೀಪಕ್ ಸಿಂಗ್(49 ಕೆಜಿ)ಸೆಮಿ ಫೈನಲ್‌ಗೆ ತಲುಪುವುದರೊಂದಿಗೆ ಪದಕ ದೃಢಪಡಿಸಿದ್ದಾರೆ.
ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ನಿಖಾತ್ ಉಜ್ಬೇಕಿಸ್ತಾನದ ಸಿಟೊರಾ ಶೊಗ್‌ದರೊರಾ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು. 49 ಕೆಜಿ ಪುರುಷರ ವಿಭಾಗದಲ್ಲಿ ಆಟ ಆರಂಭವಾದ ಕೆಲವೇ ನಿಮಿಷದಲ್ಲಿ ದೀಪಕ್ ಎದುರಾಳಿ ಥಾಯ್ಲೆಂಡ್‌ನ ಸಮಕ್ ಸಹಾನ್ ರ ಹಣೆಯಲ್ಲಿ ರಕ್ತ ಸೋರಲಾರಂಭಿಸಿದಕಾರಣ ಮೊದಲ ಸುತ್ತಿನಲ್ಲಿ ಪಂದ್ಯವನ್ನು ನಿಲ್ಲಿಸಲಾಯಿತು.
ಆಶೀಶ್(69ಕೆಜಿ), ಮಂಜು ರಾಣಿ(48ಕೆಜಿ), ಬ್ರಿಜೇಶ್ ಯಾದವ್(81ಕೆಜಿ) ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಮುಹಮ್ಮದ್ ಹುಸಮುದ್ದೀನ್(56ಕೆಜಿ)ಪದಕದ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಜಮೈಕಾದ ಜೊಶುವಾ ಫ್ರೆಝರ್ ವಿರುದ್ಧ ಪ್ರಾಬಲ್ಯ ಸಾಧಿಸಿರುವ ಆಶೀಶ್ 5-0 ಅಂತರದ ಗೆಲುವು ದಾಖಲಿಸಿದರು. ಹುಸಮುದ್ದೀನ್ ಕೊರಿಯಾ ಎದುರಾಳಿ ಲೀ ಯೆಚಾನ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು. ಬ್ರಿಜೇಶ್ ತನ್ನ ಎದುರಾಳಿ ಥಾಯ್ಲೆಂಡ್‌ನ ಜಕ್ಕಾ ಪಾಂಗ್ ಯೊಮ್‌ಖೊಟ್ ವಿರುದ್ಧ 4-1 ಅಂತರದಿಂದ ಗೆಲುವು ದಾಖಲಿಸಿದರು.
ಮಹಿಳೆಯರ ಬಾಕ್ಸಿಂಗ್‌ನಲ್ಲಿ ಮಂಜುರಾಣಿ ಇಟಲಿಯ ರಾಬರ್ಟ ಬೊನಾಟಿ ವಿರುದ್ಧ ಸುಲಭವಾಗಿ ಜಯ ಸಾಧಿಸಿದರು.
ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಮನೀಶಾ ವೌನ್(57ಕೆಜಿ)ರಶ್ಯದ ಲುಡ್ಮಿಲಾ ವೊರಾಂಟ್‌ಸೋವಾ ವಿರುದ್ಧ ಸೋಲುಂಡಿದ್ದಾರೆ.