ಬಾಕ್ಸರ್ ದಾದಾಶೇವ್ ನಿಧನ
Update: 2019-07-24 23:41 IST
ಮಾಸ್ಕೊ, ಜು.24: ಬಾಕ್ಸಿಂಗ್ ವೇಳೆ ಗಾಯಗೊಂಡಿದ್ದ ರಶ್ಯದ ಬಾಕ್ಸರ್ ಮಾಕ್ಸಿಮ್ ದಾದಾಶೇವ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
28ರ ಹರೆಯದ ದಾದಾಶೇವ್ ಶುಕ್ರವಾರ ಸೂಪರ್ ಲೈಟ್‌ವೇಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮ್ಯಾರಿಲ್ಯಾಂಡ್‌ನ ಓಕ್ಸಿನ್ ಹಿಲ್ ಎಂಜಿಎಂ ನ್ಯಾಶನಲ್ ಹಾರ್ಬರ್‌ನಲ್ಲಿ ಪುರ್ಟೊರಿಕಾದ ಸುಬ್ರೀಯಲ್ ಮಥಾಯಿಸ್ ವಿರುದ್ಧ ಸೆಣಸಾಡುತ್ತಿದ್ದಾಗ ತಲೆಗೆ ಪೆಟ್ಟಾಗಿತ್ತು.
11ನೇ ಸುತ್ತಿನಲ್ಲಿ ಹೋರಾಟದ ವೇಳೆ ದಾದಾಶೇವ್ ತಲೆಗೆ ಎದುರಾಳಿ ಹಲವು ಬಾರಿ ಪಂಚ್ ನೀಡಿದ್ದರು. ತಲೆಗೆ ಬಿದ್ದ ಪೆಟ್ಟಿನಿಂದ ಅವರ ಮೆದುಳಿಗೆ ಗಂಭೀರ ಗಾಯವಾಗಿತ್ತು. ಬಳಿಕ ದಾದಾಶೇವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.