ಬಿ ಎಸ್ ವೈ, ಡಿಕೆಶಿ ವಿರುದ್ಧ 9 ವರ್ಷಗಳ ಹಳೆಯ ಭ್ರಷ್ಟಾಚಾರ ಕೇಸ್ ವಿಚಾರಣೆಗೆ ಸುಪ್ರೀಂ ಸಮ್ಮತಿ

Update: 2019-07-26 09:43 GMT

ಹೊಸದಿಲ್ಲಿ, ಜು. 26: ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ವಿರುದ್ಧದ 9 ವರ್ಷಗಳ ಹಳೆಯ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯನ್ನು ಮರು ಆರಂಭಿಸಲು ಸುಪ್ರೀಂಕೋರ್ಟ್ ಶುಕ್ರವಾರ ಸಮ್ಮತಿ ನೀಡಿದೆ.

ಪ್ರಕರಣ ವಿಚಾರಣೆಯನ್ನು ಪುನರಾರಂಭಿಸಲು ಬಯಸುತ್ತಿರುವ ಎನ್‌ಜಿಒಗೆ ಈ ಪ್ರಕರಣದಲ್ಲಿ ಸಂಬಂಧವಿದೆಯೇ? ಎಂದು ಮೊದಲು ನಿರ್ಧರಿಸುತ್ತೇವೆ ಎಂದು ಜಸ್ಟಿಸ್ ಅರುಣ್ ಮಿಶ್ರಾ ಅವರಿದ್ದ ನ್ಯಾಯಪೀಠ ತಿಳಿಸಿದೆ.

2010ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಕುಮಾರ್ ಪರವಾಗಿ ಭೂ ಕಾನೂನಿಗೆ ವಿರುದ್ಧವಾಗಿ 4.20 ಎಕ್ರೆ ಭೂಮಿಯನ್ನು ಡಿ-ನೋಟೀಫಿಕೇಶನ್ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಯಡಿಯೂರಪ್ಪ ಹಾಗೂ ಶಿವಕುಮಾರ್ ರಾಜಕೀಯ ಎದುರಾಳಿಗಳಾಗಿದ್ದಾರೆ. ಈ ಇಬ್ಬರು ಒಟ್ಟಾಗಿ ಭೂ ಒತ್ತುವರಿ ಪ್ರಕರಣ ಪುನಾರಂಭಿಸುವುದನ್ನು ವಿರೋಧಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಯಡಿಯೂರಪ್ಪ ಇಂದು ಸಂಜೆ 6 ಗಂಟೆಗೆ ಕರ್ನಾಟಕದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲ ವಜುಬಾಯಿ ವಾಲಾ ಆಹ್ವಾನ ನೀಡಿರುವ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News