×
Ad

ಐಪಿಎಲ್ ಹರಾಜಿಗೆ ನಿಷೇಧ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 25,000 ರೂ.ದಂಡ

Update: 2019-07-26 23:10 IST

ಹೊಸದಿಲ್ಲಿ, ಜು.26: ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ನಲ್ಲಿ ಆಟಗಾರರನ್ನು ಹರಾಜಿನ ಮೂಲಕ ಖರೀದಿಸುವ ಪ್ರಕ್ರಿಯೆ ಮಾನವ ಕಳ್ಳಸಾಗಣೆಗೆ ಸಮವಾಗಿರುವುದರಿಂದ ಹರಾಜನ್ನು ನಿಷೇಧಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ದಿಲ್ಲಿಯ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ಇದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲ, ಪ್ರಚಾರ ಬಯಸುವ ಅರ್ಜಿ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಸಿ ಹರಿಶಂಕರ್ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಉಲ್ಲೇಖಿಸಿರುವ ಯಾವ ವಿಷಯವೂ ಸತ್ಯವಲ್ಲ ಎಂದು ತಿಳಿಸಿದೆ. ಐಪಿಎಲ್ ಹರಾಜಿನಲ್ಲಿ ಆಟಗಾರರನ್ನು ಖರೀದಿಸುವುದು, ಮಾರಾಟ ಮಾಡುವ ಪ್ರಕ್ರಿಯೆ ಅಕ್ರಮ ಮಾನವ ಕಳ್ಳಸಾಗಣೆಗೆ ಸಮವಾದುದು ಎಂದು ಅರ್ಜಿದಾರ ಸುಧೀರ್ ಶರ್ಮ ಹೇಳಿದ್ದರು. ಇದರಿಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಂತಾದ ಅಕ್ರಮಗಳಿಗೆ ಪ್ರೇರಣೆ ದೊರಕುತ್ತದೆ ಎಂದವರು ಅರ್ಜಿಯಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News