×
Ad

ಕಾಂಗ್ರೆಸ್, ರಾಜ್ಯಸಭಾ ಸದಸ್ಯತ್ವಕ್ಕೆ ಸಂಜಯ್ ಸಿನ್ಹಾ ರಾಜೀನಾಮೆ

Update: 2019-07-30 23:12 IST

ಹೊಸದಿಲ್ಲಿ, ಜು. 30: ರಾಜ್ಯ ಸಭಾ ಸದಸ್ಯ ಹಾಗೂ ಅಮೇಥಿ ರಾಜವಂಶದ ಸಂಜಯ್ ಸಿನ್ಹಾ ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ ಹಾಗೂ ಬಿಜೆಪಿ ಸೇರಲಿರುವುದಾಗಿ ತಿಳಿಸಿದ್ದಾರೆ.

ರಾಜ್ಯ ಸಭೆಯ ಅಸ್ಸಾಂನ ಕಾಂಗ್ರೆಸ್ ಸದಸ್ಯ ಸಿನ್ಹಾ ಸಂಸತ್ತಿನ ಮೇಲ್ಮನೆಗೆ ಕೂಡ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಕಾಂಗ್ರೆಸ್ ಈಗಲೂ ಭೂತ ಕಾಲದಲ್ಲಿ ಬದುಕುತ್ತಿದೆ. ಅದಕ್ಕೆ ಭವಿಷ್ಯದ ಬಗ್ಗೆ ಅರಿವಿಲ್ಲ ಎಂದಿದ್ದಾರೆ. ತಾನು ಬುಧವಾರ ಬಿಜೆಪಿ ಸೇರಲಿದ್ದೇನೆ ಎಂದು ಅವರು ತನ್ನ ಬೆಂಬಲಿಗರಿಗೆ ತಿಳಿಸಿದ್ದಾರೆ.

ಈ ಹಿಂದೆ ಅವರು ಬಿಜೆಪಿಯಲ್ಲಿ ಇದ್ದರು ಹಾಗೂ ಬಿಜೆಪಿ ಟಿಕೆಟ್‌ನಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ‘‘ಕಾಂಗ್ರೆಸ್ ಈಗ ಕೂಡ ಭೂತ ಕಾಲದಲ್ಲಿದೆ. ಅದಕ್ಕೆ ಭವಿಷ್ಯದ ಬಗ್ಗೆ ಅರಿವಿಲ್ಲ. ದೇಶ ಮೋದಿ ಅವರೊಂದಿಗೆ ಇದೆ. ಆದುದರಿಂದ ನಾನು ಅವರೊಂದಿಗೆ ಇದ್ದೇನೆ. ನಾನು ನಾಳೆ ಬಿಜೆಪಿ ಸೇರಲಿದ್ದೇನೆ. ನಾನು ಪಕ್ಷಕ್ಕೆ ಹಾಗೂ ರಾಜ್ಯ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ದೀರ್ಘ ಕಾಲದಿಂದ ಕಾಂಗ್ರೆಸ್ ಅನ್ನು ಗಮನಿಸಿದ ಬಳಿಕ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ’’ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ಗೆ ಯಾವುದೇ ಗುರಿ ಇಲ್ಲ. ಕಾಂಗ್ರೆಸ್ ಹಾಗೂ ಜನರ ನಡುವೆ ಅಂತರ ಸೃಷ್ಟಿಯಾಗಿದೆ. ನಾನು ಮೋದಿ ಅವರನ್ನು ಬೆಂಬಲಿಸುತ್ತೇನೆ. ಇದಕ್ಕೆ ಮೋದಿ ಅವರ ‘ಸಬ್ಕಾ ಸಾಥ್ ಸಬ್‌ಕಾ ವಿಕಾಸ್’ ಮುಖ್ಯ ಕಾರಣ ಎಂದು ಸಿನ್ಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News