ಅಕಾಡಮಿಗಳನ್ನು ಬರ್ಖಾಸ್ತುಗೊಳಿಸಬಾರದಿತ್ತು

Update: 2019-08-07 18:14 GMT

ಮಾನ್ಯರೇ,

ರಾಜ್ಯದ ಹದಿನೈದು ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡಮಿಗಳನ್ನು ಬರ್ಖಾಸ್ತುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದುದನ್ನು ನೋಡಿ ಸಖೇದಾಶ್ಚರ್ಯವಾಯಿತು. ಈ ಅಕಾಡಮಿಗಳು ರಾಜಕೀಯೇತರ ಸಾಹಿತ್ಯಕ-ಸಾಂಸ್ಕೃತಿಕ ಸಂಘಟನೆಗಳು. ಇವುಗಳ ಆಯಸ್ಸು ಮೂರು ವರ್ಷ ಮಾತ್ರ. ಅವಧಿ ಮುಗಿಯುವ ಮೊದಲೇ ಇವುಗಳ ಕತ್ತು ಹಿಚುಕುವ ಕೆಲಸ ಮಾಡಬಾರದಿತ್ತು. ಇವು ಮೂರು ವರ್ಷಗಳ ಕಾಲ ಹಾಕಿಕೊಂಡಿದ್ದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಅವಕಾಶ ಒದಗಿಸಿಕೊಡಬೇಕಿತ್ತು.

ಈ ಹಿಂದೆ ಬರಗೂರು ರಾಮಚಂದ್ರಪ್ಪರು ತಮ್ಮದೊಂದು ವರದಿಯಲ್ಲಿ ಸರಕಾರ ಯಾರದೇ ಬರಲಿ, ಅಕಾಡಮಿಗಳು ಮೂರು ವರ್ಷಗಳವರೆಗೆ ಕಾರ್ಯ ನಿರ್ವಹಿಸಲಿ ಎಂದು ಅಭಿಪ್ರಾಯ ಪಟ್ಟಿದ್ದರು. ಆದರೀಗ ಅಕಾಡಮಿಗಳು ಬರ್ಖಾಸ್ತುಗೊಂಡಿವೆ. ಈಗ ಬಂದಿರುವ ಸರಕಾರ ರಾಜಕೀಯ ಅಸ್ಥಿರತೆಯಿಂದ ಆರು ತಿಂಗಳ ಬಳಿಕ ಪತನಗೊಂಡರೆ, ಆಗ ಅಕಾಡಮಿಗಳ ಹೊಸ ಪದಾಧಿಕಾರಿಗಳ ಆಡಳಿತಾವಧಿ ಕೇವಲ ಆರು ತಿಂಗಳುಗಳಿಗಷ್ಟೇ ಸೀಮಿತವಾಗಿ ಬಿಡುತ್ತದೆ. ಎಲ್ಲಾ ಅಕಾಡಮಿಗಳನ್ನು ಗೌರವದಿಂದ ಮೂರು ವರ್ಷಗಳ ಅವಧಿ ಮುಗಿಸಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ. 

Writer - -ಡಾ. ಪ್ರಭಾಕರ ಶಿಶಿಲ

contributor

Editor - -ಡಾ. ಪ್ರಭಾಕರ ಶಿಶಿಲ

contributor

Similar News