ಸಾಯಿ ಪ್ರಣೀತ್‌ಗೆ ಐತಿಹಾಸಿಕ ಕಂಚು

Update: 2019-08-24 18:15 GMT

ಬಾಸೆಲ್, ಆ.24: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಭಾರತದ ಸಾಯಿ ಪ್ರಣೀತ್‌ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟಾಗೆ ಶರಣಾಗಿದ್ದಾರೆ. ಆದಾಗ್ಯೂ, ಕಂಚಿನ ಪದಕ ತನ್ನದಾಗಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ.

ಈ ವರ್ಷದ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಶ್ವದ ನಂ.19ನೇ ಆಟಗಾರನಾಗಿರುವ ಪ್ರಣೀತ್ ಜಪಾನ್‌ನ ಮೊಮೊಟಾ ವಿರುದ್ಧ 13-21, 8-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

 ಸಾಯಿ ಪ್ರಣೀತ್ ಪ್ರತಿಷ್ಠಿತ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 36 ವರ್ಷಗಳ ಬಳಿಕ ಪದಕ ಜಯಿಸಿದ ಮೊದಲ ಪುರುಷ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು. ಈ ಹಿಂದೆ ಪ್ರಕಾಶ್ ಪಡುಕೋಣೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ್ದರು.

ಶುಕ್ರವಾರ 51 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಫೈಟ್‌ನಲ್ಲಿ ಪ್ರಣೀತ್ ಏಶ್ಯನ್ ಗೇಮ್ಸ್ ಚಾಂಪಿಯನ್ ಜೊನಾಥನ್ ಕ್ರಿಸ್ಟಿ ಅವರನ್ನು 24-22, 21-14 ಗೇಮ್‌ಗಳ ಅಂತರದಿಂದ ಸೋಲಿಸಿ ಟೂರ್ನಮೆಂಟ್‌ನಲ್ಲಿ ಐತಿಹಾಸಿಕ ಪದಕವನ್ನು ದೃಢಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News