×
Ad

ಮ್ಯಾಚ್ ಫಿಕ್ಸಿಂಗ್: ಹಾಂಕಾಂಗ್‌ನ ಇಬ್ಬರು ಕ್ರಿಕೆಟಿಗರಿಗೆ ಆಜೀವ ನಿಷೇಧ

Update: 2019-08-26 23:57 IST

ಹಾಂಕಾಂಗ್, ಆ.26: ಹಾಂಕಾಂಗ್ ಕ್ರಿಕೆಟಿಗರಾದ ಇರ್ಫಾನ್ ಅಹ್ಮದ್ ಹಾಗೂ ನದೀಮ್ ಅಹ್ಮದ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಯಾಗಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾದ ಕಾರಣ ಐಸಿಸಿ ಈ ಇಬ್ಬರು ಕ್ರಿಕೆಟಿಗರಿಗೆ ಆಜೀವ ನಿಷೇಧ ವಿಧಿಸಿದೆ.

ಹಾಂಕಾಂಗ್‌ನ ಇನ್ನೋರ್ವ ಆಟಗಾರ ಹಸೀಬ್ ಅಮ್ಜಾದ್‌ಗೆ ಐದು ವರ್ಷ ನಿಷೇಧ ವಿಧಿಸಲಾಗಿದೆ.

ಈ ಮೂವರು ಆಟಗಾರರು ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸಾಬೀತಾಗಿರುವ ಕಾರಣ ಐಸಿಸಿ ಈ ನಿರ್ಧಾರ ಪ್ರಕಟಿಸಿದೆ. ಇರ್ಫಾನ್ ಹಾಂಕಾಂಗ್ ಪರ 6 ಏಕದಿನ ಹಾಗೂ 8 ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರ ಹಿರಿಯ ಸಹೋದರ ನದೀಮ್ 25 ಏಕದಿನ ಹಾಗೂ 24 ಟಿ-20 ಪಂದ್ಯಗಳಲ್ಲಿ ಹಾಂಕಾಂಗ್ ತಂಡವನ್ನು ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News