ಎಡವಿದ ಪ್ರಜ್ಞೇಶ್ ಗುಣೇಶ್ವರನ್
ನ್ಯೂಯಾರ್ಕ್, ಆ.27: ಭಾರತದ ಪ್ರಜ್ಞೇಶ್ ಗುಣೇಶ್ವರನ್ ಯುಎಸ್ ಓಪನ್‌ನ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿ ನಿರ್ಗಮಿಸಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಚೆನ್ನೈ ಆಟಗಾರ ಪ್ರಜ್ಞೇಶ್ ವಿಶ್ವದ ನಂ.5ನೇ ಆಟಗಾರ ಡಾನಿಲ್ ಮೆಡ್ವೆಡೆವ್‌ಗೆ ನೇರ ಸೆಟ್‌ಗಳಿಂದ ಸೋತಿದ್ದಾರೆ.
ರಶ್ಯದ ಆಟಗಾರ ಮಡ್ವೆಡೆವ್ ಇತ್ತೀಚೆಗೆ ಹಲವು ಗ್ರಾನ್‌ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್‌ರನ್ನು ಸೋಲಿಸಿ ಶಾಕ್ ನೀಡಿದ್ದ ಪ್ರಜ್ಞೇಶ್‌ರನ್ನು 6-4, 6-1,6-2 ಸೆಟ್‌ಗಳ ಅಂತರದಿಂದ ಮಣಿಸಿದರು.
ಭಾರತದ ಎಡಗೈ ಆಟಗಾರ ಪ್ರಜ್ಞೇಶ್ ಆಕ್ರಮಣಕಾರಿ ಆರಂಭ ಪಡೆದರು. ಆದರೆ, ಆರಂಭದ ತೀವ್ರತೆ ಕಾಯ್ದುಕೊಳ್ಳಲು ವಿಫಲರಾದರು. ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಸೆಟನ್ನು ಕೈಚೆಲ್ಲಿದರು. ಅನಗತ್ಯ ತಪ್ಪೆಸಗಿದ ಪ್ರಜ್ಞೇಶ್ ಒತ್ತಡಕ್ಕೆ ಸಿಲುಕಿದರು. ಕಠಿಣ ಹೋರಾಟ ನೀಡಿದರೂ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಆಡಿದ ಅನುಭವದ ಕೊರತೆ ಅವರನ್ನು ಬಾಧಿಸಿತು.
29ರ ಹರೆಯದ ಪ್ರಜ್ಞೇಶ್ ಈ ವರ್ಷ ಎಲ್ಲ ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಆಡಿದ್ದಾರೆ. ಆದರೆ, ಮೊದಲ ಸುತ್ತಿನ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ.