×
Ad

ಶಿವಸೇನೆ ಸೇರಿದ ಎನ್‌ಸಿಪಿ, ಕಾಂಗ್ರೆಸ್ ಶಾಸಕರು

Update: 2019-08-28 19:19 IST

ಮುಂಬೈ,ಆ.28: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ದಿಲೀಪ್ ಸೊಪಲ್ ಬುಧವಾರದಂದು ಮುಂಬೈಯಲ್ಲಿ ಶಿವಸೇನೆ ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ದಿಲೀಪ್ ಮಾನೆ ಅವರು ಬಾಂಡ್ರಾ ಉಪನಗರದಲ್ಲಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಎನ್‌ಸಿಪಿ ಶಾಸಕ ದಿಲೀಪ್ ಸೊಪಲ್ ಒಂದು ದಿನದ ಹಿಂದಷ್ಟೇ ತನ್ನ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೋಲಾಪುರ ಜಿಲ್ಲೆಯ ಕಾಂಗ್ರೆಸ್ ನಾಯಕ ನಾಗನಾಥ್ ಕ್ಷೀರಸಾಗರ್ ಅವರೂ ಬುಧವಾರ ಅಧಿಕೃತವಾಗಿ ಶೀವಸೇನೆ ಸೇರಿದ್ದಾರೆ.

ಆರು ಬಾರಿ ಶಾಸಕರಾಗಿರುವ ಸೊಪಲ್ 2014ರಲ್ಲಿ ಸೋಲಪುರ ಜಿಲ್ಲೆಯ ಬರ್ಶಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸೋಮವಾರ ಅವರು ತನ್ನ ರಾಜೀನಾಮೆಯನ್ನು ಘೋಷಿಸಿದ್ದರು. ಸೊಪಲ್ ಹಾಗೂ ಇತರರು ಪಕ್ಷ ಸೇರಿರುವುದನ್ನು ಸ್ವಾಗತಿಸಿರುವ ಠಾಕ್ರೆ, ಪಕ್ಷದ ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಿದ ನಂತರವಷ್ಟೇ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News