10 ಬ್ಯಾಂಕ್ ಗಳು 4 ಬ್ಯಾಂಕ್ ಗಳಾಗಿ ವಿಲೀನ: ಗ್ರಾಹಕರು ಏನನ್ನೆಲ್ಲಾ ಬದಲಿಸಬೇಕು?

Update: 2019-08-30 18:44 GMT

ಹೊಸದಿಲ್ಲಿ, ಆ.30: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಾರ್ವಜನಿಕ ವಲಯದ ಹತ್ತು ಬ್ಯಾಂಕ್‌ಗಳ ವಿಲೀನ ಘೋಷಿಸಿದ್ದಾರೆ. ಹಾಗಾದರೆ ಈ ವಿಲೀನದಿಂದ ಬ್ಯಾಂಕ್ ಗ್ರಾಹಕರು ಏನೆಲ್ಲ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ;

ಪ್ರಮುಖ ಬದಲಾವಣೆಗಳು:

1) ಹೊಸ ಚೆಕ್ ಬುಕ್ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗುವುದು.

2) ನಿಮ್ಮ ಖಾತೆ ಸಂಖ್ಯೆ ಮತ್ತು ಗ್ರಾಹಕ ಗುರುತಿನ ಸಂಖ್ಯೆ ಹಾಗೂ ಐಎಫ್‌ಎಸ್ಸಿ ಕೋಡ್‌ಗಳೂ ಬದಲಾಗಬಹುದು.

3) ಅದರ ಫಲವಾಗಿ ನೀವು ಆದಾಯ ತೆರಿಗೆ ಇಲಾಖೆ, ವಿಮಾದಾರರಲ್ಲಿ ನಿಮ್ಮ ಹೊಸ ಐಎಫ್‌ಎಸ್ಸಿ ಕೋಡನ್ನು ದಾಖಲಿಸಬೇಕಾಗುತ್ತದೆ.

4) ಮಾಸಿಕ ಕಂತುಗಳು ಮತ್ತು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ)ಗೆ ಹೊಸದಾಗಿ ಬ್ಯಾಂಕ್ ಆದೇಶ ಬೇಕಾಗುತ್ತದೆ.

5) ಬಿಲ್ ಪಾವತಿಗಳಿಗಾಗಿ ಹೊಸದಾಗಿ ಸೂಚನೆಗಳನ್ನು ನೀಡಬೇಕಾಗುತ್ತದೆ.

6) ನಿಮ್ಮ ಬ್ಯಾಂಕ್ ಶಾಖೆ ನಿಮಗಿಂತ ದೂರ ಅಥವಾ ಹತ್ತಿರವಾಗಬಹುದು.

7) ಬ್ಯಾಂಕ್ ಬಳಕೆಯ ವಸ್ತುಗಳು ಬದಲಾಗುತ್ತವೆ.

8) ಉಳಿತಾಯ ಖಾತೆ ಬಡ್ಡಿದರ ಬದಲಾಗಬಹುದು.

ಬದಲಾವಣೆಯಾಗ ಅಂಶಗಳು:

1) ಸದ್ಯ ಸ್ಥಿರ ಠೇವಣಿ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಾಗುವುದಿಲ್ಲ.

2) ನೀವು ಮುರಿಯಲಾಗದ ಸ್ಥಿರ ಠೇವಣಿಯನ್ನು ಹೊಂದಿದ್ದರೆ, ವಿಲೀನಗೊಂಡ ಬ್ಯಾಂಕ್‌ನ ಠೇವಣಿ ದರ ಅಧಿಕ ಅಥವಾ ಕಡಿಮೆಯಾಗಿದ್ದರೂ, ನಿಮ್ಮ ಸ್ಥಿರ ಠೇವಣಿಯ ಮುಕ್ತಾಯದವರೆಗೂ ಅದರ ಹಿಂದಿನ ಬಡ್ಡಿದರವನ್ನೇ ಪಡೆಯಬಹುದು.

3) ಸಾಲ ದರಗಳು ಬದಲಾಗುವುದಿಲ್ಲ.

4) ಎಂಸಿಎಲ್‌ಆರ್ ಆಧರಿತ ಸಾಲಗಳಾಗಿದ್ದರೆ ಸಾಲಗಾರರು ಆಯ್ಕೆ ಮಾಡಿರುವ ಪುನರ್‌ನಿಗಧಿ ಅವಧಿಯ ಕೊನೆಯಲ್ಲಿ ಬಡ್ಡಿದರವನ್ನು ಪುನರ್‌ನಿಗದಿಪಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News