27 ದೇವಾಲಯ ಧ್ವಂಸಗೈದು ಕುತಾಬ್ ಮಿನಾರ್ ನಿರ್ಮಾಣ: ಕೇಂದ್ರ ಪ್ರವಾಸೋದ್ಯಮ ಸಚಿವರ ವಿವಾದಾತ್ಮಕ ಹೇಳಿಕೆ

Update: 2019-09-01 09:16 GMT

ಹೊಸದಿಲ್ಲಿ, ಸೆ.1: "ನಮ್ಮ ಸಂಸ್ಕೃತಿಯ ಅತಿದೊಡ್ಡ ನಿದರ್ಶನ ಎನಿಸಿದ ಕುತುಬ್ ಮಿನಾರ್, 27 ದೇವಸ್ಥಾನಗಳನ್ನು ಧ್ವಂಸಗೊಳಿಸಿ ನಿರ್ಮಿಸಿದ್ದು” ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ. ಸ್ವಾತಂತ್ರ್ಯದ ಬಳಿಕವೂ ಇದನ್ನು ನಾವು ವಿಶ್ವ ಪರಂಪರೆ ತಾಣ ಎಂದು ಸಂಭ್ರಮಿಸುತ್ತಿದ್ದೇವೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ರಾತ್ರಿ ಈ ಐತಿಹಾಸಿಕ ಸ್ಮಾರಕಕ್ಕೆ ದೀಪಾಲಂಕಾರ ವ್ಯವಸ್ಥೆ ಉದ್ಘಾಟಿಸಿ ಅವರು ಮಾತನಾಡಿದರು.

“ಈ ಸಂಕೀರ್ಣದಲ್ಲಿರುವ 24 ಅಡಿ ಎತ್ತರದ ಉಕ್ಕಿನ ಸ್ತಂಭ ಈ ಸ್ಮಾರಕಕ್ಕಿಂತ ಹಲವು ಶತಮಾನಗಳಷ್ಟು ಹಳೆಯದು. ಇದು ನಮ್ಮ ನೈಪುಣ್ಯತೆಯ ಸ್ಮಾರಕವಾಗಿದ್ದು, 1600 ವರ್ಷಗಳು ಕಳೆದಿದ್ದು, ಬಿಸಿಲು ಗಾಳಿಗೆ ಹೊರಗೆಯೇ ಇದ್ದರೂ ಇದು ತುಕ್ಕು ಹಿಡಿದಿಲ್ಲ” ಎಂದು ಸಚಿವರು ಪ್ರತಿಪಾದಿಸಿದರು. ಈ ಸ್ತಂಭದ ಇತಿಹಾಸ ಹಾಗೂ ಮಹತ್ವವನ್ನು ವಿವರಿಸುವ ಫಲಕವನ್ನು ಅಳವಡಿಸುವಂತೆಯೂ ಅವರು ಭಾರತದ ಪ್ರಾಚ್ಯ ವಸ್ತು ಇಲಾಖೆಗೆ ಮನವಿ ಮಾಡಿದರು.

ಕುತುಬ್ ಮಿನಾರ್ ನಿರ್ಮಿಸುವ ಮುನ್ನ ಮೊಘಲರು ದೇವಾಲಯ ನಾಶಪಡಿಸಿದ್ದಾರೆ ಎಂದು ಹೇಳಿದ ಅವರು, "ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಕುತುಬ್ ಮಿನಾರ್ ಸಂಕೀರ್ಣವನ್ನು ವಶಕ್ಕೆ ಪಡೆದಾಗ ಕೂಡಾ ಯೋಗಮಾಯಾ ದೇವಾಲಯ ಇತ್ತು. ಆದರೆ ಈ ದೇವಾಲಯವನ್ನು ಸಂರಕ್ಷಣಾ ಏಜೆನ್ಸಿಗೆ ಏಕೆ ವಿಸ್ತರಿಸಿಲ್ಲ” ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News