ಪ್ರೊ ಕಬಡ್ಡಿ ಲೀಗ್: ಯೋಧಾಗೆ ಶರಣಾದ ವಾರಿಯರ್ಸ್

Update: 2019-09-01 17:48 GMT

ಬೆಂಗಳೂರು, ಸೆ.1: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯುಪಿ ಯೋಧಾಕ್ಕೆ ಎರಡನೇ ಬಾರಿ ಸೋಲುಣಿಸುವ ಬಂಗಾಳ ವಾರಿಯರ್ಸ್ ಗುರಿ ಈಡೇರಲಿಲ್ಲ. ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ರವಿವಾರ ನಡೆದ ಲೀಗ್‌ನ 69ನೇ ಪಂದ್ಯದಲ್ಲಿ ಯೋಧಾ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ವಾರಿಯರ್ಸ್ ತಂಡವನ್ನು 32-29 ಅಂಕಗಳ ಅಂತರದಿಂದ ಮಣಿಸಿ ಆಘಾತ ನೀಡಿತು.

ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಯೋಧಾ ತಂಡಕ್ಕೆ ಶ್ರೀಕಾಂತ್ ಜಾಧವ್(9) ಹಾಗೂ ನಿತೇಶ್ ಕುಮಾರ್(7)ಗೆಲುವು ತಂದರು. ಪರಾಜಿತ ವಾರಿಯರ್ಸ್ ಪರ ಇಸ್ಮಾಯೀಲ್ 7 ಹಾಗೂ ಬಲದೇವ್ ಸಿಂಗ್ 5 ಅಂಕ ಗಳಿಸಿದರು. ತಾನಾಡಿದ 11ನೇ ಪಂದ್ಯದಲ್ಲಿ 3ನೇ ಸೋಲು ಕಂಡಿರುವ ವಾರಿಯರ್ಸ್ ಒಟ್ಟು 39 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News