ನಿಸ್ವಾರ್ಥ ಸೇವೆಯ ‘ಜೂನಿಯರ್ ಫಾದರ್ ಮುಲ್ಲರ್’ ಡಾ. ಗಿರೀಶ್ ನಾವಡ

Update: 2019-09-02 12:20 GMT
ಡಾ. ಗಿರೀಶ್ ನಾವಡ

ಮಂಗಳೂರು : ನಗರದ ಫಾದರ್ ಮುಲ್ಲರ್ ಹೋಮಿಯೋ ಆಸ್ಪತ್ರೆಯ ಡಾ. ಗಿರೀಶ್ ನಾವಡ ನಿಸ್ವಾರ್ಥ ಸೇವೆಯ ವೈದ್ಯರಲ್ಲೊಬ್ಬರು. ಸಮಾಜ ಸೇವೆಯ ಉದ್ದೇಶದಿಂದ ಹೊರದೇಶದಿಂದ ಇಲ್ಲಿಗೆ ಆಗಮಿಸಿದ ಫಾದರ್ ಅಗುಸ್ತುಸ್ ಮುಲ್ಲರ್ ರೋಗಿಗಳ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಹೋಮಿಯೋ ಔಷಧೋಪಾಚರದ ತವರೂರಾಗಿರುವ ಜರ್ಮನಿಯಿಂದ ಭಾರತಕ್ಕೆ ಈ ಔಷಧಿಯನ್ನು ತಂದು ಇಲ್ಲಿ ಅದನ್ನು ಅವರು ಪರಿಚಯಸಿದ್ದರು.

ಇದೀಗ ಅದೇ ಫಾದರ್ ಮುಲ್ಲರ್ಸ್‌ನ ಹೋಮಿಯೋ ಆಸ್ಪತ್ರೆಯ ಡಾ. ಗಿರೀಶ್ ನಾವಡರನ್ನು ‘ಜೂನಿಯರ್ ಫಾದರ್ ಮುಲ್ಲರ್’ರಂತೆ ರೋಗಿಗಳ ಸೇವೆಯನ್ನು ಮಾಡುತ್ತಿದ್ದಾರೆ.

ದೇಶದಲ್ಲಿಯೇ ಹೋಮಿಯೋಪತಿ ಔಷಧಿಗೆ ಪ್ರಥಮವೆನಿಸಿರುವ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರಾಗಿರು ಡಾ. ಗಿರೀಶ್ ನಾವಡ, ರೋಗಿಗಳ ಅಚ್ಚುಮೆಚ್ಚಿನ ವೈದ್ಯ. ಇವರ ಸೇವೆಗಾಗಿ ದೂರದ ಊರುಗಳಿಂದ ರಾಜ್ಯಗಳಿಂದ ರೋಗಿಗಳು ಇಲ್ಲಿಗೆ ಬರುತ್ತಾರೆ. ಬುಧವಾರದಂದು ಸುಮಾರು 250ರಷ್ಟು ರೋಗಿಗಳು ಇವರಿಗಾಗಿ ಕಾದು ಕುಳಿತಿರುತ್ತಾರೆ.

ನಿಸ್ವಾರ್ಥ ಮನೋಭಾವದಿಂದ ನಗುಮೊಗದಿಂದಲೇ ರೋಗಿಗಳಿಗೆ ಸೇವೆಯನ್ನು ನೀಡುವ ಇಂತಹ ವೈದ್ಯರು, ಈ ವೈದ್ಯ ಪದ್ಧತಿ ಇಂದಿನ ಜೀವನ ಪದ್ಧತಿಗೆ ಅತೀ ಅಗತ್ಯವಾಗಿಯೂ ಪರಿಣಮಿಸಿದೆ. ‘‘ಸಿಮಿಲಿಯ ಸಿಮಿಲಿಬುಸ್ ಕ್ಯೂರಾಂತರ್’’ ಎಂಬ ತತ್ವದ ಮೂಲಕ ಈ ಹೋಮಿಯೋಪತಿ ಔಷಧಿಯ ಪ್ರಯೋಗ ನಡೆಯುತ್ತದೆ. ಒಂದು ರೋಗಿಯ ದೇಹದ ಕಾಯಿಲೆಯ ಗುಣಲಕ್ಷಣಗಳನ್ನು ತಿಳಿದು ಔಷಧಿಯನ್ನು ನೀಡಲಾಗುತ್ತದೆ. ಕಡಿಮೆ ಖರ್ಚಿನಲ್ಲಿ, ನೋವಿಲ್ಲದೇ ಗುಣಪಡಿಸುವ ಚಿಕಿತ್ಸೆಗಾಗಿಯೂ ಈ ಪದ್ಧತಿ ಹೆಸರು ಪಡೆದಿದೆ.

ಔಷಧಿ ಯಾವುದೇ ಪದ್ಧತಿಯದ್ದೇ ಆಗಿರಲಿ ಅದನ್ನು ನೀಡುವ ವೈದ್ಯನು ರೋಗಿಗಳೊಂದಿಗೆ ನಡೆದುಕೊಳ್ಳುವ ರೀತಿ, ಉಪಚಾರ, ರೋಗಿಗಳನ್ನು ಬೇಗನೆ ಗುಣಮುಖರನ್ನಾಗಿಸುವುದಲ್ಲದೆ, ವೈದ್ಯನ ಸೇವೆಯೂ ನಿಸ್ವಾರ್ಥವಾಗಿ ಗುರುತಿಸಿಕೊಳ್ಳುತ್ತದೆ. ಅಂತಹ ವೈದ್ಯರಲ್ಲೊಬ್ಬರು ಡಾ. ಗಿರೀಶ್ ನಾವಡರಾಗಿದ್ದು, ಅವರಿಂದ ಚಿಕಿತ್ಸೆ, ಔಷಧಿಗಾಗಿ ರೋಗಿಗಳು ಜಾತ್ರೆಯ ರೀತಿಯಲ್ಲಿ ಫಾದರ್ ಮುಲ್ಲರ್ ಹೋಮಿಯೋ ಆಸ್ಪತ್ರೆಯಲ್ಲಿ ಸೇರುವುದೇ ಅವರ ಸೇವೆಗೆ ಸಾಕ್ಷಿ.

ಇಂತಹ ನಿಸ್ವಾರ್ಥ ಹಾಗೂ ಸೇವಾ ಮನೋಭಾವದ ವೈದ್ಯರು ಇನ್ನಷ್ಟು ಹೆಚ್ಚಲಿ, ರೋಗಿಗಳಲ್ಲಿ ಆತ್ಮವಿಶ್ವಾಸ ಬೆಳೆಯಲಿ, ಸಂಸ್ಥೆಗಳು ಇಂತಹ ವೈದ್ಯರನ್ನು ಹುರಿದುಂಬಿಸಲು, ಮನುಕುಲವು ರೋಗಮುಕ್ತವಾಗಲಿ ಎಂಬುದು ನನ್ನ ಆಶಯ

- ಸಿಸ್ಟರ್ ಕ್ಲಾರಾ ಸ್ಟೆಲ್ಲ ಸಿಕ್ವೇರಾ.

ಬಿಜೈ ಜೈಲ್, ಸಮಾಜ ಸೇವಾ ಕಾರ್ಯಕರ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News