2020ರ ಜೂನ್‌ನಿಂದ ಏಕ ಬಳಕೆಯ ಪ್ಲಾಸ್ಟಿಕ್ ಬಳಸದಿರಲು ಅಮೆಝಾನ್ ನಿರ್ಧಾರ
ಹೊಸದಿಲ್ಲಿ, ಸೆ. 4: ಪರಿಸರ ರಕ್ಷಿಸಲು ಏಕ ಬಳಕೆಯ ಪ್ಲಾಸ್ಟಿಕ್ ಬಳಸದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆಗ್ರಹಿಸಿದ ಬಳಿಕ, 2020 ಜೂನ್‌ನಿಂದ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಪ್ಯಾಕೇಜಿಂಗ್‌ಗೆ ಬಳಸದಿರುವ ನಿರ್ಧಾರವನ್ನು ಅಮೆಝಾನ್ ಇಂಡಿಯಾ ಕೈಗೊಂಡಿದೆ.
ದೇಶದಲ್ಲಿ ಸುಸ್ಥಿರತೆಯ ಪ್ರಯತ್ನದ ಒಂದು ಭಾಗವಾಗಿ 2020 ಜೂನ್‌ನಿಂದ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಪ್ಯಾಕೇಜಿಂಗ್‌ನಿಂದ ದೂರ ಇರಿಸುವ ಗುರಿ ಹೊಂದಲಾಗಿದೆ ಎಂದು ಇ-ಕಾಮರ್ಸ್ ದೈತ್ಯ ಅಮೆಝಾನ್ ಇಂಡಿಯಾ ಬುಧವಾರ ತಿಳಿಸಿದೆ.
ಪರಿಸರ ರಕ್ಷಿಸಲು ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ದೂರವಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗ ಪ್ರಜೆಗಳಲ್ಲಿ ವಿನಂತಿಸಿದ ಬಳಿಕ ಅಮೆಝಾನ್ ಈ ನಿರ್ಧಾರ ತೆಗೆದುಕೊಂಡಿದೆ.
ಅಮೆಝಾನ್ ಎಫ್‌ಸಿ ಅಥವಾ ಮಳಿಗೆಯಲ್ಲಿ ಪ್ಯಾಕೇಜಿಂಗ್‌ಗೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಶೇ. 7ಕ್ಕಿಂತ ಕಡಿಮೆ ಎಂದು ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಮಾಲಕತ್ವದ ವಾಲ್‌ಮಾರ್ಟ್ ವಿರುದ್ಧ ಮುಂಚೂಣಿಗೆ ಬರಲು ಹೋರಾಟ ನಡೆಸುತ್ತಿರುವ ಅಮೆಝಾನ್ ಹೇಳಿದೆ.