180 ರೂ.ಗಾಗಿ ಜಗಳ: ಯುವಕನ ಥಳಿಸಿ ಹತ್ಯೆ

Update: 2019-09-05 17:03 GMT

ಭಾದೋಹಿ, ಸೆ. 5: ರೂ. 180 ಬಿಲ್ ಕುರಿತ ವಿವಾದದ ಹಿನ್ನೆಲೆಯಲ್ಲಿ ಹೊಟೇಲ್‌ನ ಮಾಲಕ ಹಾಗೂ ವೈಟರ್‌ಗಳು 25 ವರ್ಷದ ಯುವಕನನ್ನು ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಊಟದ ಬಿಲ್ ಕುರಿತು ಹೊಟೇಲ್ ಮಾಲಕನೊಂದಿಗೆ ವಾಗ್ವಾದ ನಡೆಸಿದ ಸೂರಜ್ ಸಿಂಗ್ ಹಾಗೂ ವಿಶಾಲ್ ದುಬೆಗೆ ಮಾಲಕ ಹಾಗೂ ವೈಟರ್ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸ್ ಅಧೀಕ್ಷಕ ರಾಮ್ ಬಡಾನ್ ಸಿಂಗ್ ತಿಳಿಸಿದ್ದಾರೆ. ದುಬೆ ಪರಾರಿಯಾಗುವಲ್ಲಿ ಯಶಸ್ವಿಯಾದ. ಆದರೆ ಸೂರಜ್ ಸಿಂಗ್ ಅನ್ನು ಅವರು ಹಿಡಿದ ಥಳಿಸಿದರು. ಗಂಭೀರ ಗಾಯಗೊಂಡಿದ್ದ ಆತ ಮೃತಪಟ್ಟ ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಮಹಾರಾಜ್‌ಗಂಜ್ ಸಮೀಪದ ಸರ್ದಾರ್ ಧಾಭಾದಲ್ಲಿ ಸಂಭವಿಸಿದೆ. ಕೇವಲ 180 ರೂಪಾಯಿ ಬಿಲ್‌ಗಾಗಿ ಈ ವಿವಾದ ಆರಂಭವಾಗಿತ್ತು ಎಂದು ಅವರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹೊಟೇಲ್ ಮಾಲಕ ಹಾಗೂ ಆತನ ಪುತ್ರ ಸುರೇಂದ್ರ ಸಿಂಗ್‌ನನ್ನು ಬಂಧಿಸಲಾಗಿದೆ. ಇತರ ಇಬ್ಬರು ವೈಟರ್‌ಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News