ಈ.ಡಿ.ಯಿಂದ ಜೆಟ್ ಸ್ಥಾಪಕ ನರೇಶ್ ಗೋಯಲ್ ವಿಚಾರಣೆ

Update: 2019-09-06 14:00 GMT

ಮುಂಬೈ,ಸೆ.6: ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದ ಪ್ರಕರಣದಲ್ಲಿ ಜೆಟ್ ಏರ್‌ ವೇಸ್ ‌ನ ಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ (ಈ.ಡಿ.)ವು ಶುಕ್ರವಾರ ವಿಚಾರಣೆಗೊಳಪಡಿಸಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಗೋಯಲ್ ಅವರ ಮುಂಬೈ ನಿವಾಸ,ಅವರ ಸಮೂಹ ಕಂಪನಿಗಳು,ಅವುಗಳ ನಿರ್ದೇಶಕರ ನಿವಾಸಗಳು ಮತ್ತು ಜೆಟ್ ಏರ್‌ವೇಸ್ ಕಚೇರಿ ಸೇರಿದಂತೆ ಒಂದು ಡಝನ್ ಸ್ಥಳಗಳ ಶೋಧ ಕಾರ್ಯಾಚರಣೆಗಳನ್ನು ನಡೆಸಿದ ಬಳಿಕ ಇದೇ ಮೊದಲ ಬಾರಿ ಈ.ಡಿ.ಅವರನ್ನು ಇಲ್ಲಿಯ ತನ್ನ ವಲಯ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ)ಯಡಿ ಗೋಯಲ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಗೋಯಲ್ ತನ್ನ ನೇತೃತ್ವದಲ್ಲಿ 19 ಖಾಸಗಿ ಕಂಪನಿಗಳನ್ನು ಹೊಂದಿದ್ದು,ಈ ಪೈಕಿ ಐದು ವಿದೇಶಗಳಲ್ಲಿ ನೋಂದಣಿಗೊಂಡಿದ್ದವು.

ಈ ಕಂಪನಿಗಳು ಮಾರಾಟ,ವಿತರಣೆ ಮತ್ತು ಕಾರ್ಯಾಚರಣೆ ವೆಚ್ಚಗಳ ಸೋಗಿನಲ್ಲಿ ಶಂಕಾತ್ಮಕ ವಹಿವಾಟುಗಳನ್ನು ನಡೆಸಿದ್ದವು ಎಂಬ ಆರೋಪಗಳ ಕುರಿತು ಈ.ಡಿ.ತನಿಖೆ ನಡೆಸುತ್ತಿದೆ. ಈ ಕಂಪನಿಗಳು ಸುಳ್ಳು ಲೆಕ್ಕಗಳ ಮೂಲಕ ಭಾರೀ ನಷ್ಟವನ್ನು ತೋರಿಸಿದ್ದವು ಎಂದು ಅದು ಶಂಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News