ಅಧ್ಯಾಪಕ, ಉಪ ಪ್ರಾಂಶುಪಾಲನಿಂದ 9 ವರ್ಷದ ವಿದ್ಯಾರ್ಥಿನಿಯ ಅತ್ಯಾಚಾರ: ಆರೋಪ

Update: 2019-09-09 17:23 GMT

ಧನ್‌ಬಾದ್, ಸೆ. 9: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಶಾಲೆಯೊಂದರ ಉಪ ಪ್ರಾಂಶುಪಾಲ ಹಾಗೂ ಅಧ್ಯಾಪಕ ಶಾಲೆಯ ಆವರಣದಲ್ಲಿ 9 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯ ವಿಶ್ರಾಂತಿ ಕೊಠಡಿಯಲ್ಲಿ ತಿಂಗಳ ಹಿಂದೆ ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ ಬಳಿಕ ತೋಪಚಂಚಿ ಮೂಲದ ಶಾಲೆಯ ಇಬ್ಬರು ಅಧ್ಯಾಪಕರ ವಿರುದ್ಧ ಕತ್ರಾಸ್ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ವಿಷಯ ಗಂಭೀರವಾಗಿರುವುದರಿಂದ ಹಾಗೂ ಬಾಲಕಿ ಸಲ್ಲಿಸಿದ ದೂರಿನ ಆಧಾರದಲ್ಲಿ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಧನ್‌ಬಾದ್‌ನ ಹಿರಿಯ ಪೊಲೀಸ್ ಅಧೀಕ್ಷಕ ಕಿಶೋರ್ ಕೌಶಲ್ ತಿಳಿಸಿದ್ದಾರೆ.

‘‘ಪೊಲೀಸರು ಎಲ್ಲಾ ಆಯಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆಯ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟಲಿಪುತ್ರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಪಿಎಂಸಿಎಚ್ ಅಧೀಕ್ಷಕ ಡಾ. ಎಚ್.ಕೆ. ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News