ಇಸಿಬಿ ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿ ಆ್ಯಂಡ್ರೊ ಸ್ಟ್ರಾಸ್ ನೇಮಕ

Update: 2019-09-13 17:39 GMT

ಲಂಡನ್, ಸೆ.13: ಇಂಗ್ಲೆಂಡ್‌ನ ಮಾಜಿ ನಾಯಕ ಆ್ಯಂಡ್ರೂ ಸ್ಟ್ರಾಸ್ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ(ಇಸಿಬಿ)ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈಮೂಲಕ ಇಸಿಬಿ ಗೆ ವಾಪಸಾಗಿದ್ದಾರೆ.

42ರ ಹರೆಯದ ಸ್ಟ್ರಾಸ್ ಕೌಟುಂಬಿಕ ಕಾರಣದಿಂದ ಕಳೆದ ವರ್ಷ ಇಸಿಬಿ ನಿರ್ದೇಶಕನ ಸ್ಥಾನ ತ್ಯಜಿಸಿದ್ದರು. ಸ್ಟ್ರಾಸ್‌ರಿಂದ ತೆರವಾದ ಸ್ಥಾನವನ್ನು ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಅಶ್ಲೆ ಗಿಲ್ಸ್ ತುಂಬಿದ್ದರು.

‘‘ನಾನು ಕಷ್ಟದಲ್ಲಿದ್ದಾಗ ಇಸಿಬಿ ಸಂಪೂರ್ಣ ಬೆಂಬಲ ನೀಡಿತ್ತು. ಇಸಿಬಿಗೆ ವಾಪಸಾಗುತ್ತಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ...ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಕ್ರಿಕೆಟ್ ಬೆಳವಣಿಗೆಗೆ ಶ್ರಮಿಸಲು ನಾನು ಕಾತರನಾಗಿದ್ದೇನೆ’’ ಎಂದು ಸ್ಟ್ರಾಸ್ ಬಿಬಿಸಿಗೆ ತಿಳಿಸಿದ್ದಾರೆ.

ಸ್ಟ್ರಾಸ್ ಈ ಹಿಂದೆ ಇಸಿಬಿ ನಿರ್ದೇಶಕರಾಗಿದ್ದಾಗ ಟ್ರೆವರ್ ಬೆಲಿಸ್‌ರನ್ನು ಕೋಚ್ ಆಗಿ ನೇಮಕ ಮಾಡಿದ್ದರು. ಬೆಲಿಸ್ ಮಾರ್ಗದರ್ಶನದಲ್ಲಿ ಜುಲೈನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಚೊಚ್ಚಲ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News