ಲೈಂಗಿಕ ಕಿರುಕುಳ ಕಳಂಕಿತ ಪ್ರೊಫೆಸರನ್ನು‍ ಮರುನೇಮಿಸಿದ ಬನಾರಸ್ ಹಿಂದೂ ವಿವಿ: ವಿದ್ಯಾರ್ಥಿಗಳ ಪ್ರತಿಭಟನೆ

Update: 2019-09-15 08:30 GMT

ಲಕ್ನೋ, ಸೆ.15: ಲೈಂಗಿಕ ಕಿರುಕುಳ ಆರೋಪದಲ್ಲಿ ಕಳೆದ ವರ್ಷ ಅಮಾನತುಗೊಂಡಿದ್ದ ಪ್ರೊಫೆಸರ್ ಒಬ್ಬರು ತರಗತಿಗೆ ಮರಳಿದ್ದನ್ನು ಖಂಡಿಸಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಶನಿವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.

ಫೇಸ್‍ ಬುಕ್ ಪೇಜ್ ನಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯ ಫೋಟೊಗಳನ್ನು ಅಪ್‍ಲೋಡ್ ಮಾಡಿದ್ದು, ಮುಸ್ಸಂಜೆವರೆಗೂ ಕ್ಯಾಂಪಸ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರವಿವಾರ ಮುಂಜಾನೆ ಮತ್ತಷ್ಟು ವಿದ್ಯಾರ್ಥಿಗಳು ಪ್ರತಿಭಟನೆಗೆ ಕೈಜೋಡಿಸಿದ್ದಾರೆ.

ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಎಸ್.ಕೆ.ಚೌಬೆ, ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಒಡಿಶಾಗೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾಗ ವಿದ್ಯಾರ್ಥಿನಿಯರತ್ತ ತೀರಾ ಅಶ್ಲೀಲ ಪದಗಳನ್ನು ಬಳಸುವ ಜತೆಗೆ, ಅಶ್ಲೀಲ ಸಂಜ್ಞೆಗಳನ್ನೂ ಮಾಡಿದ್ದರು ಎಂದು ಆಪಾದಿಸಲಾಗಿತ್ತು.

ವಿಶ್ವವಿದ್ಯಾನಿಲಯದ ಆಂತರಿಕ ದೂರು ಸಮಿತಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಲ್ಲಿಸಿದ ವರದಿಯ ಆಧಾರದಲ್ಲಿ ಚೌಬೆಯವರನ್ನು ಮರುನೇಮಕ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಪ್ರೊಫೆಸರ್‍ ಗೆ ಛೀಮಾರಿ ಹಾಕಲಾಗಿದ್ದು, ಇದು ಅವರ ಸೇವಾ ದಾಖಲೆಯಲ್ಲೂ ದಾಖಲಾಗುತ್ತದೆ ಎಂದು ಪ್ರತಿಭಟನಾಕಾರರಿಗೆ ಮನವೊಲಿಕೆ ಮಾಡುವ ಪ್ರಯತ್ನವನ್ನು ಅಧಿಕಾರಿಗಳು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News