‘5 ಟ್ರಿಲಿಯನ್’ ಸೊನ್ನೆಗಳಿಂದ ಮುಖಭಂಗಕ್ಕೊಳಗಾದ ಬಿಜೆಪಿ ನಾಯಕ ಸಂಬಿತ್ ಪಾತ್ರ!

Update: 2019-09-15 10:41 GMT

ಹೊಸದಿಲ್ಲಿ, ಸೆ.15: ಮೋದಿ ಸರಕಾರದ 100 ದಿನಗಳ ಆಡಳಿತದ ಬಗ್ಗೆ ನಡೆದ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ಸಂಬಿತ್ ಪಾತ್ರ 5 ಟ್ರಿಲಿಯನ್ ಆರ್ಥಿಕತೆಯ ಬಗ್ಗೆ ಮಾತನಾಡಲು ಹೋಗಿ ಮುಖಭಂಗಕ್ಕೊಳಗಾದ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಬಿತ್ ಪಾತ್ರ ಭಾರತವು 5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿದೆ ಎಂದರು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ವಕ್ತಾರ, “ಟ್ರಿಲಿಯನ್ ನಲ್ಲಿರುವ ಸೊನ್ನೆಗಳ ಸಂಖ್ಯೆಯೆಷ್ಟು ಎಂದು ತಿಳಿಸಿ” ಎಂದು ಸಂಬಿತ್ ಗೆ ಸವಾಲೆಸೆದರು.

ಇದರಿಂದ ತಬ್ಬಿಬ್ಬಾದ ಸಂಬಿತ್ ಪಾತ್ರ ತಡವರಿಸುತ್ತಾ ಉತ್ತರ ಹೇಳುವಂತೆ ನಟಿಸಿದರೇ ಹೊರತು ಉತ್ತರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಸಂಬಿತ್ , “ಈ ಪ್ರಶ್ನೆಯನ್ನು ಮೊದಲು ರಾಹುಲ್ ಗಾಂಧಿಗೆ ಕೇಳಿ” ಎಂದರು. ಕೂಡಲೇ ಕಾರ್ಯಕ್ರಮದ ನಿರೂಪಕ ಕಾಂಗ್ರೆಸ್ ವಕ್ತಾರರಲ್ಲಿ ಟ್ರಿಲಿಯನ್ ನಲ್ಲಿರುವ ಸೊನ್ನೆಗಳು ಎಷ್ಟು ಎಂದು ನೀವು ಹೇಳಿ ಎಂದರು. ಕೂಡಲೇ ಟ್ರಿಲಿಯನ್ ಸೇರಿ ಮಿಲಿಯನ್ ಮತ್ತು ಬಿಲಿಯನ್ ಗಳಲ್ಲಿರುವ ಸಂಖ್ಯೆಗಳನ್ನೂ ಅವರು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News