×
Ad

ನ್ಯೂಝಿಲ್ಯಾಂಡ್‌ಗೆ ತೆರಳಿದ ಕಿಮ್

Update: 2019-09-15 23:57 IST

ಹೈದರಾಬಾದ್, ಸೆ.15: ಕೊರಿಯಾದ ಕೋಚ್ ಕಿಮ್ ಜಿನ್ ಹ್ಯೂನ್ ಅವರು ಪಿ.ವಿ.ಸಿಂಧು ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಅವರು ಇದೀಗ ಅನಾರೋಗ್ಯಕ್ಕೀಡಾಗಿರುವ ಪತಿಯ ನೆರವಿಗೆ ನ್ಯೂಝಿಲ್ಯಾಂಡ್‌ಗೆ ತೆರಳಿದ್ದಾರೆ.

   ಕಿಮ್ ಯಾವಾಗ ನ್ಯೂಝಿಲ್ಯಾಂಡ್‌ನಿಂದ ಭಾರತಕ್ಕೆ ವಾಪಸಾಗುತ್ತಾರೆ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಕಿಮ್ ಅನುಪಸಿತ್ಥಿಯಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್ ಭಾರತದ ಬ್ಯಾಡ್ಮಿಂಟನ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಚೀನಾ ಓಪನ್ ಬಿಡಬ್ಲುಎಫ್ ಸೂಪರ್ 1000 ಟೂರ್ನಮೆಂಟ್ ಚೀನಾದ ಚಾಂಗ್‌ಝೌನಲ್ಲಿ ಮಂಗಳವಾರ ಪ್ರಾರಂಭಗೊಳ್ಳಲಿದೆ. ಗೋಪಿಚಂದ್ ಭಾರತದ ತಂಡದೊಂದಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ದಕ್ಷಿಣ ಕೊರಿಯಾದ ಕಿಮ್ ಇತ್ತೀಚಿನವರೆಗೂ ಕೊರಿಯಾ ತಂಡದ ಕೋಚ್ ಆಗಿದ್ದರು. ಕಳೆದ ಮಾರ್ಚ್‌ನಲ್ಲಿ ಭಾರತದ ಸಿಂಗಲ್ಸ್ ತಂಡದ ಕೋಚ್ ಆಗಿ ಸೇರ್ಪಡೆಗೊಂಡಿದ್ದರು. ಕಿಮ್ ಸೈನಾ ಮತ್ತು ಸಿಂಧು ಅವರಿಗೆ ಕೋಚ್ ಆಗಿದ್ದಾರೆ . ಆದರೆ ಸೈನಾ ಅವರು ಪಿ.ಕಶ್ಯಪ್ ಅವರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಸಿಂಧು ಅವರಿಗೆ ತರಬೇತಿ ನೀಡುವ ಕಡೆಗೆ ಕಿಮ್ ಹೆಚ್ಚಿನ ಗಮನ ಹರಿಸಿದ್ದಾರೆ. ಸಿಂಧು ಅವರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಲು ಕಿಮ್ ನೆರವಾಗಿದ್ದರು. ಕಿಮ್ ಭಾರತಕ್ಕೆ ತಕ್ಷಣ ವಾಪಸಾಗುವ ಸಾಧ್ಯತೆ ಇಲ್ಲ. ಹೀಗಾಗಿ ಗೋಪಿಚಂದ್‌ಗೆ ಹೆಚ್ಚಿನ ಹೊರೆ ಬೀಳಬಹುದು. ಇದರಿಂದ ಅಗ್ರಸರದಿಯ ಆಟಗಾರರ ದೀರ್ಘಾವಧಿಯ ಯೋಜನೆಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News