ಜಪಾನ್‌ನ ಹಿಬ್ನೋಗೆ ಹಿರೋಶಿಮಾ ಪ್ರಶಸ್ತಿ

Update: 2019-09-15 18:29 GMT

ಹಿರೋಶಿಮಾ, ಸೆ.15:ಜಪಾನ್‌ನ ನಾವೊ ಹಿಬ್ನೊ ಅವರು ಹಿರೋಶಿಮಾ ಓಪನ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಹಿಬ್ನೊ ಅವರು ತನ್ನ ಡಬಲ್ಸ್ ಪಾರ್ಟ್‌ನರ್ ಮಿಸಾಕಿ ಡೊಯ್ ವಿರುದ್ಧ 6-3, 6-2 ಅಂತರದಲ್ಲಿ ಜಯ ಸಾಧಿಸಿ ಟ್ರೋಫಿ ಎತ್ತಿದರು.

2015ರ ಬಳಿಕ ಹಿಬ್ನೊ ಇದೇ ಮೊದಲ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಜಪಾನ್‌ನ ಶ್ರೇಯಾಂಕರಹಿತ ಇಬ್ಬರು ಆಟಗಾರ್ತಿಯರು ಕಳೆದ 22 ವರ್ಷಗಳಲ್ಲಿ ಮೊದಲ ಬಾರಿ ಡಬ್ಲುಟಿಎ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News