600ಕ್ಕೂ ಅಧಿಕ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಿದ ಗವಾಸ್ಕರ್

Update: 2019-09-17 18:06 GMT

ಹೊಸದಿಲ್ಲಿ, ಸೆ.17: ಹಾರ್ಟ್ ಟು ಹಾರ್ಟ್(ಎಚ್ ಟು ಎಚ್)ಪ್ರತಿಷ್ಠಾನದ ಭಾಗವಾಗಿರುವ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ದೇಶದ 600ಕ್ಕೂ ಅಧಿಕ ಬಡಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಬೆಂಬಲವಾಗಿ ಅಮೆರಿಕದಲ್ಲಿ ನಿಧಿ ಸಂಗ್ರಹಣೆ ಮಾಡಿದ್ದಾರೆ.

 ಭಾರತದ ಸತ್ಯಸಾಯಿ ಸಂಜೀವನಿ ಆಸ್ಪತ್ರೆ ಶಸ್ತ್ರಚಿಕಿತ್ಸೆ ನಡೆಸಲಿದೆ. ಈ ಆಸ್ಪತ್ರೆಯು 2012ರಿಂದ ಈತನಕ ಉಚಿತವಾಗಿ 10,000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಿದೆ. ಈ ಪೈಕಿ 400ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗೆ ಎಚ್‌ಟುಎಚ್ ಪ್ರತಿಷ್ಠಾನ ಹಣಕಾಸು ವ್ಯವಸ್ಥೆ ಮಾಡಿದ್ದು, 34 ಸರ್ಜರಿಗಳಿಗೆ ಕ್ರಿಕೆಟ್ ದಂತಕತೆ ಗವಾಸ್ಕರ್ ವಿಶೇಷ ಧನಸಹಾಯ ಮಾಡಿದ್ದಾರೆ.

 ‘‘ಭಾರತದ ಬಡಮಕ್ಕಳಿಗೆ ಉಚಿತ ಹಾರ್ಟ್ ಸರ್ಜರಿ ನಡೆಸುವುದಕ್ಕಾಗಿ ಬೆಂಬಲವಾಗಿ ಅಮೆರಿಕದ ವಿವಿಧ ನಗರಗಳಲ್ಲಿ ನಡೆದ ನಿಧಿ ಸಂಗ್ರಹ ಕಾರ್ಯ ಯಶಸ್ವಿಯಾಗಿ ನೆರವೇರಿದ್ದು,ಇದೊಂದು ಶ್ರೇಷ್ಠ ಆರಂಭಿಕ ಇನಿಂಗ್ಸ್ ಆಗಿತ್ತು. ಅಮೆರಿಕದ ವಿವಿಧ ನಗರಗಳಲ್ಲಿ ನಿಧಿ ಸಂಗ್ರಹಕ್ಕೆ ನೆರವು ನೀಡಿದವರಿಗೆ ನಾನು ಕೃತಜ್ಞತೆ ಸಲ್ಲಿಸುವೆ’’ ಎಂದು ಗವಾಸ್ಕರ್ ಹೇಳಿದ್ದಾರೆ.

‘‘ಸತ್ಯಸಾಯಿ ಸಂಜೀವನಿ ಆಸ್ಪತ್ರೆಯು ಮಹಾರಾಷ್ಟ್ರ, ಛತ್ತೀಸ್‌ಗಢ ಹಾಗೂ ಹರ್ಯಾಣದಲ್ಲಿ 10,000 ಸರ್ಜರಿಗಳನ್ನು ನಡೆಸಿದ್ದು, 36,000 ಅಧಿಕ ಮಕ್ಕಳು ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಚಿಕಿತ್ಸೆ ನೀಡದೇ ಇದ್ದರೆ ಹೆಚ್ಚು ಸಮಯ ಬದುಕಲಾರರು’’ ಎಂದು ಆಸ್ಪತ್ರೆಯ ಅಧ್ಯಕ್ಷ ಶ್ರೀನಿವಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News