ದೇಶದ ಹೈಕೋರ್ಟ್ ಗಳಲ್ಲಿ ಖಾಲಿಯಿರುವ ನ್ಯಾಯಾಧೀಶರ ಹುದ್ದೆಗಳು ಎಷ್ಟು ಗೊತ್ತಾ?

Update: 2019-10-15 15:15 GMT

ಹೊಸದಿಲ್ಲಿ,ಅ.15: ಸರ್ವೋಚ್ಚ ನ್ಯಾಯಾಲಯವು ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಿಸುತ್ತಿದ್ದರೆ,ದೇಶದ 25 ಉಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಖಾಲಿ ಹುದ್ದೆಗಳು ಹೆಚ್ಚುತ್ತಲೇ ಇವೆ ಎಂದು ಕಾನೂನು ಸಚಿವಾಲಯದ ಇತ್ತೀಚಿನ ಅಂಕಿಅಂಶಗಳು ತೋರಿಸಿವೆ.

ಅ.1ರಂದು ಬಿಡುಗಡೆಗೊಂಡಿದ್ದ ಈ ಅಂಕಿಅಂಶಗಳಂತೆ ಉಚ್ಚ ನ್ಯಾಯಾಲಯಗಳು 420 ನ್ಯಾಯಾಧೀಶರ ಕೊರತೆಯನ್ನು ಎದುರಿಸುತ್ತಿದ್ದು,ಇದು ಈ ವರ್ಷದಲ್ಲಿ ಈವರೆಗಿನ ದಾಖಲೆಯ ಸಂಖ್ಯೆಯಾಗಿದೆ. ಉಚ್ಚ ನ್ಯಾಯಾಲಯಗಳಿಗೆ ಮಂಜೂರಾಗಿರುವ ನ್ಯಾಯಾಧೀಶರ ಸಂಖ್ಯೆ 1079 ಆಗಿದ್ದರೆ,ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರ ಸಂಖ್ಯೆ 659 ಆಗಿದೆ.

ಸೆಪ್ಟೆಂಬರ್‌ನಲ್ಲಿ 25 ಉಚ್ಚ ನ್ಯಾಯಾಲಯಗಳಲ್ಲಿ ಖಾಲಿಯಿದ್ದ ನ್ಯಾಯಾಧೀಶರ ಹುದ್ದೆಗಳ ಸಂಖ್ಯೆ 414 ಆಗಿತ್ತು. ಈ ಸಂಖ್ಯೆ ಜುಲೈನಲ್ಲಿ 403 ಮತ್ತು ಆಗಸ್ಟ್‌ನಲ್ಲಿ 409 ಆಗಿತ್ತು. ಉಚ್ಚ ನ್ಯಾಯಾಲಯಗಳಲ್ಲಿ 43 ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿಯಿವೆ.

ನಿವೃತ್ತಿ,ರಾಜೀನಾಮೆ ಅಥವಾ ಪದೋನ್ನತಿ ಮತ್ತು ನ್ಯಾಯಾಧೀಶರ ಹುದ್ದೆಗಳ ಹೆಚ್ಚಳ ಇವುಗಳಿಂದಾಗಿ ಖಾಲಿ  ಹುದ್ದೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News