ಅಮಿತ್ ಶಾ ಹೇಳಿಕೆಯನ್ನು ಅಲ್ಲಗಳೆದ ಜಮ್ಮು ಕಾಶ್ಮೀರ ಪೊಲೀಸರು

Update: 2019-10-15 15:18 GMT

ಹೊಸದಿಲ್ಲಿ,ಅ.15: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ) ಅಡಿ ಬಂಧಿಸಲಾಗಿದೆ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆಯನ್ನು ತಿರಸ್ಕರಿಸಿರುವ ಜಮ್ಮು-ಕಾಶ್ಮೀರ ಪೊಲೀಸರು,ಅವರನ್ನು ಸಿಆರ್‌ಪಿಸಿಯಡಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದ ಶಾ ಅವರನ್ನು, ‘ಪಿಎಸ್‌ಎಯನ್ನು ಹೇರುವ ಮುನ್ನವೇ ತನ್ನನ್ನು ಗೃಹಬಂಧನದಲ್ಲಿರಿಸಲಾಗಿತ್ತು’ ಎಂಬ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆ ನಿಜವೇ ಎಂದು ಪ್ರಶ್ನಿಸಲಾಗಿತ್ತು. ಇದನ್ನು ನಿರಾಕರಿಸಿದ್ದ ಶಾ,ಉಮರ್ ಮತ್ತು ಮುಫ್ತಿ ಅವರ ಬಂಧನ ಕುರಿತು ಪ್ರಶ್ನೆಗೆ,ಅವರಿನ್ನೂ ಪಿಎಸ್‌ಎ ಅಡಿ ಬಂಧನದಲ್ಲಿದ್ದಾರೆ ಎಂದು ಉತ್ತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News