​ಈ ಹೋಟೆಲ್‌ನಲ್ಲಿ ಸ್ವದೇಶಿ ರೊಬೋಟ್ ವೈಟರ್‌ಗಳು !

Update: 2019-10-17 04:12 GMT

ಭುವನೇಶ್ವರ: ಪೂರ್ವ ಭಾರತದಲ್ಲಿ, ದೇಶಿನಿರ್ಮಿತ ರೊಬೋಟ್ ಸಪ್ಲಯರ್‌ಗಳನ್ನು ಹೊಂದಿರುವ ಮೊಟ್ಟಮೊದಲ ಹೋಟೆಲ್ ಎಂಬ ಹೆಗ್ಗಳಿಕೆಗೆ ಇಲ್ಲಿನ ರೋಬೊಶೆಫ್ ರೆಸ್ಟೋರೆಂಟ್ ಪಾತ್ರವಾಗಿದೆ.

ಒಡಿಶಾ ರಾಜಧಾನಿಯ ಚಂದ್ರಶೇಖರಪುರದಲ್ಲಿರುವ ಈ ರೆಸ್ಟೋರೆಂಟ್‌ನಲ್ಲಿ ಚಂಪಾ ಹಾಗೂ ಚಮೇಲಿ ಎಂಬ ರೊಬೋಟ್‌ಗಳು ಗ್ರಾಹಕರಿಗೆ ತಿಂಡಿ ತಿನಸುಗಳನ್ನು ಒದಗಿಸುತ್ತವೆ. ಕಾಯುತ್ತಿರುವ ಗ್ರಾಹಕರಿಗೆ ತಿಂಡಿ ತಿನಸು ತಂದುಕೊಟ್ಟ ಬಳಿಕ ನಿಮಗೆ ಸಂತೋಷವಾಯಿತೇ (ಅಪನಾ ಮನೆ ಖುಷಿ ತೋ) ಎಂದು ಕೇಳುತ್ತದೆ. 2019ರ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಚುರಪಡಿಸಿದ ಪದಪುಂಜ ಇದು.

ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಜೀತ್ ಬಸಾ ಈ ರೆಸ್ಟೋರೆಂಟ್‌ನ ಮಾಲಕ. ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ರೊಬೋಟ್‌ಗಳು ಸೇವೆ ಒದಗಿಸುವುದನ್ನು ಕಂಡು ಅದರಿಂದ ಉತ್ತೇಜಿತರಾಗಿ ಈ ಸೇವೆ ಆರಂಭಿಸಿದ್ದಾಗಿ ಅವರು ಹೇಳುತ್ತಾರೆ.

"ಭಾರತದಲ್ಲಿ ಹಲವು ರೆಸ್ಟೋರೆಂಟ್‌ಗಳಲ್ಲಿ ರೊಬೋಟ್‌ಗಳು ಸಪ್ಲೈ ಮಾಡುತ್ತಿದ್ದರೂ, ಅವರಿಗಾಗಿಯೇ ವಿಶೇಷ ಟ್ರ್ಯಾಕ್ ಹೊಂದಿರದ ಮೊದಲ ರೆಸ್ಟೋರೆಂಟ್ ನಮ್ಮದು. ಸಮತಲದ ಯಾವುದೇ ನೆಲದಲ್ಲಿ ಅವು ಚಲಿಸುತ್ತವೆ. ಇದಲ್ಲದೇ ಸಂಪೂರ್ಣ ಭಾರತದಲ್ಲೇ ಉತ್ಪಾದನೆಯದ ರೋಬೋಟ್‌ಗಳು ಇವು. ಉಳಿದ ಕಡೆಗಳಲ್ಲಿರುವ ರೊಬೋಟ್‌ಗಳು ಚೀನಾದಿಂದ ಆಮದು ಮಾಡಿಕೊಂಡವು" ಎಂದು ವಿವರಿಸುತ್ತಾರೆ.

ಈ ರೆಸ್ಟೋರೆಂಟ್‌ನಲ್ಲಿ ಬಳಕೆಯಾಗುವ ರೊಬೋಟ್‌ಗಳು ಸೈಮಲ್ಟೇನಿಯಸ್ ಲೊಕೇಶನ್ ಆ್ಯಂಡ್ ಮ್ಯಾಪಿಂಗ್ (ಸ್ಲ್ಯಾಮ್) ತಂತ್ರಜ್ಞಾನದಿಂದ ಚಾಲಿತ. ಇದಕ್ಕೆ ಮಾರ್ಗಸೂಚಿ ಅಥವಾ ಪರಿಸರದಲ್ಲಿ ಸೂಕ್ತ ಬದಲಾವಣೆ ಅಗತ್ಯವಿಲ್ಲ. ಪರಿಸರವನ್ನು ಗ್ರಹಿಸುವ ನಿಟ್ಟಿನಲ್ಲಿ 17 ಬಗೆಯ ಸೆನ್ಸಾರ್‌ಗಳನ್ನು ಇದಕ್ಕೆ ಅಳವಡಿಸಲಾಗಿದ್ದು, ಶಾಖ, ಹೊಗೆಯನ್ನು ಕೂಡಾ ಇದು ಗ್ರಹಿಸಬಲ್ಲದು. ಜನರನ್ನು ಗುರುತಿಸಿ ಅವರನ್ನು ಸ್ವಾಗತಿಸುತ್ತದೆ. ಕೇವಲ ಆಹಾರ ಪೂರೈಸುವುದು ಮಾತ್ರವಲ್ಲದೇ ಗ್ರಾಹಕರಿಂದ ಆಹಾರದ ಆರ್ಡರ್ ಪಡೆಯುವ ಕೆಲಸವನ್ನು ಕೂಡಾ ಇದು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News