ಮೊದಲ ಹಗಲು-ರಾತ್ರಿ ಟೆಸ್ಟ್ ಈಡನ್ ಗಾರ್ಡನ್‌ನಲ್ಲಿ ನಡೆಸಲು ಬಿಸಿಸಿಐ ಬಯಸಿದೆ: ಬಿಸಿಬಿ

Update: 2019-10-28 10:01 GMT

ಹೊಸದಿಲ್ಲಿ, ಅ.27: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮುಂಬರುವ ಸರಣಿಯ ಎರಡನೇ ಟೆಸ್ಟ್ ನ್ನು ಹಗಲು ರಾತ್ರಿ ಟೆಸ್ಟ್ ಆಗಿ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಯಸಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಿಳಿಸಿದೆ.

 ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್ ಭಾರತದ ಮೊದಲ ಹಗಲು-ರಾತ್ರಿ ಟೆಸ್ಟ್ ಅನ್ನು ಆಯೋಜಿಸಬಹುದು. ಆದರೆ, ಇದಕ್ಕೆ ಬಿಸಿಬಿ ಇನ್ನೂ ಒಪ್ಪಿಗೆ ನೀಡಿಲ್ಲ. "ಅವರು (ಬಿಸಿಸಿಐ) ಪ್ರಸ್ತಾಪಿಸಿದ್ದಾರೆ (ಹಗಲು-ರಾತ್ರಿ ಟೆಸ್ಟ್) ಮತ್ತು ಸ್ವಲ್ಪ ಯೋಚಿಸಿದ ನಂತರ ನಾವು ಅವರಿಗೆ ತಿಳಿಸುತ್ತೇವೆ" ಎಂದು ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಯ ಅಧ್ಯಕ್ಷ ಅಕ್ರಮ್ ಖಾನ್ ರವಿವಾರ ಸುದ್ದಿಗಾರರಿಗೆ ತಿಳಿಸಿದರು.

"ನಾವು ಪತ್ರವನ್ನು ಸ್ವೀಕರಿಸಿದ್ದೇವೆ ಮತ್ತು ಈ ನಿಟ್ಟಿನಲ್ಲಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಆದರೆ ನಾವು ಅದನ್ನು (ಇನ್ನೂ) ಚರ್ಚಿಸಿಲ್ಲ. ನಮ್ಮ ನಿರ್ಧಾರದ ಬಗ್ಗೆ ಒಂದು ಅಥವಾ ಎರಡು ದಿನಗಳಲ್ಲಿ ನಾವು ಅವರಿಗೆ ತಿಳಿಸುತ್ತೇವೆ" ಎಂದು ಅವರು ಹೇಳಿದರು.

ಹೊಸದಾಗಿ ಚುನಾಯಿತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಈ ಹಿಂದೆ ಭಾರತದ ನಾಯಕ ವಿರಾಟ್ ಕೊಹ್ಲಿ ಒಪ್ಪುವುದಾದರೆ ಬಾಂಗ್ಲಾದೇಶ ಸರಣಿಯಲ್ಲಿಯೇ ಭಾರತ ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್ ಆಡಬಹುದು ಎಂದು ಹೇಳಿದ್ದಾರೆ.

ಮೊದಲ ಟೆಸ್ಟ್ ನವೆಂಬರ್ 14 ರಂದು ಇಂದೋರ್‌ನಲ್ಲಿ ಪ್ರಾರಂಭವಾಗಲಿದ್ದು, ಎರಡನೇ ಟೆಸ್ಟ್ ನವೆಂಬರ್ 22 ರಿಂದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ. ಆಟಗಾರರ ಮತ್ತು ತಂಡದ ನಿರ್ವಹಣೆಯ ಒಪ್ಪಿಗೆ ಪಡೆದ ನಂತರವೇ ಮಂಡಳಿಯು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಬಿಸಿಬಿ ಮುಖ್ಯಸ್ಥ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.

"ಮೊದಲಿಗೆ ನಾವು ಅದರ ಬಗ್ಗೆ ಆಟಗಾರರು ಮತ್ತು ತಂಡದ ನಿರ್ವಹಣೆಯ ಸದಸ್ಯರ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕಾಗಿದೆ. ಇದು ಸಂಪೂರ್ಣವಾಗಿ ತಾಂತ್ರಿಕ ವಿಷಯವಾಗಿದೆ ಅವರು ತಿಳಿಸಿದರು.

ಪ್ರವಾಸ ಸರಣಿಯು ಮೂರು ಪಂದ್ಯಗಳ ಟ್ವೆಂಟಿ 20 ಸರಣಿಯೊಂದಿಗೆ ಪ್ರಾರಂಭವಾಗುತ್ತದೆ, ಅದರಲ್ಲಿ ಮೊದಲನೆಯದು ನವೆಂಬರ್ 3 ರಂದು ನಡೆಯಲಿದೆ. ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬಾಂಗ್ಲಾದೇಶದ ಮೊದಲ ಪಂದ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News