ಬಾಬೋಸ್-ಮ್ಲೆಡೆನೊವಿಕ್‌ಗೆ ಡಬ್ಲ್ಯುಟಿಒ ಡಬಲ್ಸ್ ಪ್ರಶಸ್ತಿ
ಶೆಂಝೆನ್ (ಚೀನಾ ), ನ.3: ಡಬ್ಲ್ಯುಟಿಎ ಫೈನಲ್‌ನಲ್ಲಿ ಹಂಗೇರಿಯದ ಟೈಮಾ ಬಾಬೋಸ್ ಮತ್ತು ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲೆಡೆನೊವಿಕ್ ಅವರು ಹ್ಸೀಹ್ ಸುವೀ ಮತ್ತು ಬಾರ್ಬೊರಾ ಸ್ಟ್ರೈಕೋವಾ ವಿರುದ್ಧ ನೇರ ಸೆಟ್‌ಗಳಿಂದ ಜಯ ಗಳಿಸುವ ಮೂಲಕ 11 ವರ್ಷಗಳಲ್ಲಿ ಪ್ರಶಸ್ತಿಯನ್ನು ಎರಡನೇ ಬಾರಿ ಉಳಿಸಿಕೊಂಡ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನಂ.2 ಶ್ರೇಯಾಂಕಿತ ಆಟಗಾರ್ತಿರಾದ ಹ್ಸೀಹ್ ಸುವೀ ಮತ್ತು ಬಾರ್ಬೊರಾ ಸ್ಟ್ರೈಕೋವಾ ಅವರನ್ನು 6-1, 6-3 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿದರು. 63 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಬಾಬೋಸ್ ಮತ್ತು ಕ್ರಿಸ್ಟಿನಾ ಸುಲಭವಾಗಿ ಜಯ ದಾಖಲಿಸಿದರು.
ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಬಾಬೋಸ್ ಮತ್ತು ಕ್ರಿಸ್ಟಿನಾ ಮ್ಲೆಡೆನೊವಿಕ್ ಅವರು 2008ರ ಬಳಿಕ ಎರಡನೇ ಬಾರಿ ಟ್ರೋಫಿ ಜಯಿಸಿದ ಮೊದಲ ಜೋಡಿ ಎನಿಸಿಕೊಂಡಿದ್ದಾರೆ. 2008ರಲ್ಲಿ ಆಂಡ್ರಿಯಾ ಸೆಸ್ಟಿನಿ ಮತ್ತು ಹ್ಲವಾಕೋವಾ ಪ್ರಶಸ್ತಿ ಜಯಿಸಿದ್ದರು. ಆ ಬಳಿಕ ಇದೇ ಮೊದಲ ಬಾರಿ ಬಾಬೋಸ್-ಮ್ಲೆಡೆನೋವಿಕ್ ಈ ಸಾಧನೆ ಮಾಡಿದರು.