ಇರ್ಫಾನ್ ಪಾಕ್ ಪರ ಆಡಿದ ಹಿರಿಯ ವೇಗದ ಬೌಲರ್
Update: 2019-11-03 23:57 IST
ಸಿಡ್ನಿ, ನ.3: ಮುಹಮ್ಮದ್ ಇರ್ಫಾನ್ 1992ರ ಬಳಿಕ ಪಾಕಿಸ್ತಾನದ ಪರ ಆಡಿದ ಅತ್ಯಂತ ಹಿರಿಯ ವೇಗದ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ಆಸ್ಟ್ರೇಲಿಯ-ಪಾಕಿಸ್ತಾನದ ಮಧ್ಯೆ ಸಿಡ್ನಿಯಲ್ಲಿ ರವಿವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಇರ್ಫಾನ್ ಈ ಸಾಧನೆ ಮಾಡಿದರು.
ಇರ್ಫಾನ್‌ಗೆ ಈಗ 37 ವಯಸ್ಸು. ಹಾಲಿ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ 1992ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕ್‌ನ್ನು ಪ್ರತಿನಿಧಿಸಿದ್ದ ಸಂದಭದಲ್ಲಿ ಅವರಿಗೆ 39 ವಯಸ್ಸಾಗಿತ್ತು. ಮಿರಾನ್ ಬಕ್ಷ್ ಪಾಕ್ ಪರ ಆಡಿದ ಅತ್ಯಂತ ಹಿರಿಯ ವಯಸ್ಸಿನ ಬೌಲರ್ ಆಗಿದ್ದಾರೆ. ಬಕ್ಷ್ 1955ರಲ್ಲಿ ತನ್ನ 47ನೇ ವಯಸ್ಸಿನಲ್ಲಿ ಭಾರತ ವಿರುದ್ಧ ಪಂದ್ಯ ಆಡಿದ್ದರು.