ಸರಕಾರಿ ಇಲಾಖೆಗಳಲ್ಲಿ ಹಣವಿಲ್ಲದಿದ್ದರೂ ಶ್ರೀರಾಮ ಪ್ರತಿಮೆ ನಿರ್ಮಾಣಕ್ಕೆ 447 ಕೋ.ರೂ. ಮಂಜೂರು ಮಾಡಿದ ಆದಿತ್ಯನಾಥ್!

Update: 2019-11-04 14:22 GMT

ಲಕ್ನೋ, ನ.4: ರಾಜ್ಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶ್ರೀರಾಮ ಪ್ರತಿಮೆ ಸ್ಥಾಪನೆಗಾಗಿ 61 ಹೆಕ್ಟೇರ್ ಭೂಸ್ವಾಧೀನಕ್ಕಾಗಿ 447.46 ಕೋಟಿ ರೂ. ಮಂಜೂರು ಮಾಡಿದ್ದಾರೆ.

251 ಮೀಟರ್ ಎತ್ತರದ ಈ ಪ್ರತಿಮೆಯ ನಿರ್ಮಾಣಕ್ಕಾಗಿ ತಾಂತ್ರಿಕ ಅಧ್ಯಯನಕ್ಕಾಗಿ ಇದಕ್ಕೂ ಮೊದಲು ಈಗಾಗಲೇ 200 ಕೋಟಿ ರೂ. ಗಳನ್ನು ಮಂಜೂರು ಮಾಡಲಾಗಿತ್ತು. ಹಣದ ಕೊರತೆಯನ್ನು ಕಾರಣವಾಗಿಸಿ ರಾಜ್ಯದ ಆಡಳಿತವು 25 ಸಾವಿರ ಹೋಮ್ ಗಾರ್ಡ್ ಸಿಬ್ಬಂದಿಯನ್ನು ಮನೆಗೆ ಕಳುಹಿಸಿದ ಕೆಲ ದಿನಗಳಲ್ಲೇ ಈ ಹಣ ಮಂಜೂರಾಗಿದೆ.

ಉತ್ತರ ಪ್ರದೇಶದಲ್ಲಿ ಸುಮಾರು 90 ಸಾವಿರ ಹೋಮ್ ಗಾರ್ಡ್ ಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News