×
Ad

ಅಯೋಧ್ಯೆ ತೀರ್ಪು: ಟ್ವಿಟರ್ ನಲ್ಲಿ #hindumuslimbhaibhai ಟ್ರೆಂಡಿಂಗ್ !

Update: 2019-11-09 10:12 IST

ಮಹತ್ವದ ಅಯೋಧ್ಯೆ ಬಾಬರಿ ಮಸೀದಿ ಕುರಿತ ವಿವಾದದ ತೀರ್ಪು ಸುಪ್ರೀಂ ಕೋರ್ಟ್ ನಲ್ಲಿ ಹೊರಬೀಳಲು ಕ್ಷಣಗಣನೆ ಪ್ರಾರಂಭವಾಗಿರುವಂತೆಯೇ ಟ್ವಿಟರ್ ನಲ್ಲಿ ಹಿಂದೂ ಮುಸ್ಲಿಂ ಭಾಯ್ ಭಾಯ್(ಹಿಂದೂ ಮುಸ್ಲಿಮರು ಸೋದರರು) #hindumuslimbhaibhai  ಟ್ರೆಂಡಿಂಗ್ ಆಗಿದೆ. 

#AYODHYAVERDICT ಟ್ವಿಟರ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ  #hindumuslimbhaibhai ಇರುವುದು ಗಮನಾರ್ಹವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಬೆನ್ನಿಗೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರಗಳು ಸರ್ವ ಪ್ರಯತ್ನ ನಡೆಸುತ್ತಿರುವ ಬೆನ್ನಿಗೇ ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಅಭಿಯಾನ ಯಶಸ್ಸು ಕಂಡಿರುವುದು ಎಲ್ಲರಿಗೂ ಸಂತಸ ತಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News