ಟೆನಿಸ್ ವೃತ್ತಿ ಜೀವನಕ್ಕೆ ಥಾಮಸ್ ಬೆರ್ಡಿಕ್ ವಿದಾಯ

Update: 2019-11-17 18:21 GMT

ಲಂಡನ್, ನ.17: ವಿಶ್ವದ ಮಾಜಿ ನಂ.4 ಟೆನಿಸ್ ಆಟಗಾರ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ಅವರು ಟೆನಿಸ್ ವೃತ್ತಿ ಜೀವನಕ್ಕೆ ರವಿವಾರ ವಿದಾಯ ಘೋಷಿಸಿದರು. ಬೆರ್ಡಿಕ್ ತಮ್ಮ ವೃತ್ತಿ ಜೀವನದಲ್ಲಿ ಪ್ಯಾರಿಸ್‌ಮಾಸ್ಟರ್ಸ್‌ ಸೇರಿದಂತೆ 13 ಬಾರಿ ಎಟಿಪಿ ಫೈನಲ್ಸ್ ಚಾಂಪಿಯನ್ ಆಗಿದ್ದಾರೆ. 2005ರಲ್ಲಿ ಟೆನಿಸ್ ಮಾಸ್ಟರ್ಸ್‌ ಚಾಂಪಿಯನ್ ಆಗಿದ್ದರು. 2010ರಲ್ಲಿ ಥಾಮಸ್ ಅವರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದರು. ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಸೋಲು ಅನಿಭವಿಸಿದ್ದರು. ಇದೇ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಸ್ ಹಣಾಹಣಿಯಲ್ಲಿ ರೋಜರ್ ಫೆಡರರ್ ಅವರನ್ನು ಮಣಿಸಿದ್ದರು. ನಂತರ, ಸೆಮಿಫೈನಲ್ಸ್ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್‌ವಿರುದ್ಧ ಗೆಲುವು ದಾಖಲಿಸಿದ್ದರು. 2015ರಲ್ಲಿಎಟಿಪಿ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಇವರ ವೃತ್ತಿಬದುಕಿನ ಅತ್ಯುನ್ನತ ಶ್ರೇಯಾಂಕವಾಗಿದೆ. ಥಾಮಸ್ ಬೆರ್ಡಿಕ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿರುವುದನ್ನು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News