ಸಂಸತ್ ನಲ್ಲಿ ಭದ್ರತಾ ಸಿಬ್ಬಂದಿಯಿಂದ ಮಹಿಳಾ ಸಂಸದರ ಮೇಲೆ ಹಲ್ಲೆ: ಕಾಂಗ್ರೆಸ್ ಆರೋಪ

Update: 2019-11-25 09:40 GMT

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿನ ಸರಕಾರ ರಚನೆ ಕಸರತ್ತು ವಿಚಾರದಲ್ಲಿ ಇಂದು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್  ಪಕ್ಷದ ಮಹಿಳಾ ಸಂಸದೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಆರೋಪಿಸಿದ್ದಾರೆ.

ಘೋಷವಾಕ್ಯಗಳನ್ನು ಬರೆದ ಪೋಸ್ಟರುಗಳನ್ನು ಹಿಡಿದು ಸದನದ ಅಂಗಣಕ್ಕೆ ನುಗ್ಗಿದ ಕಾಂಗ್ರೆಸ್ ಸದಸ್ಯರು ಮಾರ್ಷಲ್‍ಗಳೊಂದಿಗೆ ವಸ್ತುಶಃ ಕಾದಾಡುವಂತಾಗಿತ್ತು. ನಂತರ ಸಂಸತ್ ಕಲಾಪಗಳನ್ನು ಮುಂದೂಡಲಾಯಿತು.

``ಭದ್ರತಾ ಸಿಬ್ಬಂದಿ ಮಹಿಳಾ ಸಂಸದರನ್ನು ಬಲವಂತವಾಗಿ ತಡೆಯಲು ಯತ್ನಿಸಿದ್ದಾರೆ, ಈ ಹಿಂದೆ ಸಂಸತ್ತಿನಲ್ಲಿ ಹೀಗಾಗಿದ್ದು ನಾವು ನೋಡಿಲ್ಲ. ಇದಕ್ಕೆ ಕಾರಣರಾದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಕಾದು ನೋಡುತ್ತೇವೆ'' ಎಂದು ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.

"ಇದು ನಮಗೆ ಪರೀಕ್ಷೆಯ ಕಾಲ, ಒಂದೋ ಪ್ರಜಾಪ್ರಭುತ್ವ ಉಳಿಯಬೇಕು ಇಲ್ಲದೇ ಇದ್ದರೆ ದೇಶದಲ್ಲಿ ಸರ್ವಾಧಿಕಾರವಿರುವುದು'' ಎಂದು ಅವರು ಹೇಳಿದರು.

ತಮಿಳುನಾಡಿನ ಕಾಂಗ್ರೆಸ್ ಸಂಸದೆ ಜೋತಿಮಣೆ ತಮ್ಮನ್ನು ಬಲವಂತವಾಗಿ ತಡೆಯಲಾಯಿತು ಎಂದು ದೂರಿದರಲ್ಲದೆ ತಮ್ಮ  ಹಾಗೂ ರಮ್ಯಾ ಹರಿದಾಸ್ ಅವರ ಮೇಲೆ ನಡೆದ ದೌರ್ಜನ್ಯ ಕುರಿತಂತೆ ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News