×
Ad

ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರಿಂದ 13,000ಕ್ಕೂ ಅಧಿಕ ದೂರುಗಳ ಸ್ವೀಕಾರ: ಎಂಇಎ

Update: 2019-11-27 18:50 IST

ಹೊಸದಿಲ್ಲಿ, ನ.27: ವಿದೇಶಗಳಲ್ಲಿ ಉದ್ಯೋಗಗಳಲ್ಲಿರುವ ಭಾರತೀಯರಿಂದ 13,000ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಲಾಗಿದ್ದು,ಇವು ವೇತನ ಬಾಕಿ ಮತ್ತು ವಂಚನೆಗಳಿಗೆ ಸಂಬಂಧಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ)ವು ತಿಳಿಸಿದೆ.

102 ರಾಷ್ಟ್ರಗಳ ಪೈಕಿ ಅತಿ ಹೆಚ್ಚಿನ (3,8440) ದೂರುಗಳನ್ನು ಸೌದಿ ಅರೇಬಿಯಾದಲ್ಲಿ ದುಡಿಯುತ್ತಿರುವ ಭಾರತೀಯರು ಸಲ್ಲಿಸಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧರನ್ ಅವರು, 2018ರಲ್ಲಿ 17,379 ದೂರುಗಳನ್ನು ಸ್ವೀಕರಿಸಲಾಗಿದ್ದರೆ 2019, ಅ.31ರವರೆಗೆ 13,665 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News