ಭಾರತಕ್ಕೆ ಪ್ರತಿವರ್ಷ 100ಕ್ಕೂ ಅಧಿಕ ಪೈಲಟ್‌ಗಳ ಅಗತ್ಯವಿದೆ: ಕೇಂದ್ರ ಸಚಿವ

Update: 2019-11-27 13:25 GMT

ಹೊಸದಿಲ್ಲಿ, ನ.27: ವಾಯುಯಾನ ಕ್ಷೇತ್ರದಲ್ಲಿ ಪ್ರತಿವರ್ಷ ಸುಮಾರು 100 ಹೆಚ್ಚುವರಿ ಪೈಲಟ್‌ಗಳ ಅಗತ್ಯವಿದೆ ಮತ್ತು ಕೊರತೆಯನ್ನು ನೀಗಿಸಲು ಸರಕಾರವು ತನ್ನ ಹಾರಾಟ ತರಬೇತಿ ಅಕಾಡಮಿಗಳನ್ನು ಮೇಲ್ದರ್ಜೆಗೇರಿಸಲಿದೆ ಎಂದು ನಾಗರಿಕ ವಾಯುಯಾನ ಸಚಿವ ಹರದೀಪ್ ಸಿಂಗ್ ಪುರಿ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ದೇಶದಲ್ಲಿ 32 ಹಾರಾಟ ತರಬೇತಿ ಸಂಸ್ಥೆಗಳಿದ್ದು ಇವು ಪ್ರತಿ ವರ್ಷ ಸುಮಾರು 350 ಪೈಲಟ್‌ಗಳಿಗೆ ತರಬೇತಿ ನೀಡುತ್ತಿವೆ. ಈ ಪೈಕಿ 23 ಖಾಸಗಿ ಕ್ಷೇತ್ರದ್ದಾಗಿದ್ದರೆ,ಉಳಿದ ಒಂಭತ್ತು ಸಂಸ್ಥೆಗಳು ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರಗಳಿಗೆ ಸೇರಿವೆ ಎಂದ ಅವರು,100 ವಿಮಾನಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು,ಪ್ರತಿವರ್ಷ 100 ಹೆಚ್ಚಿನ ಪೈಲಟ್‌ಗಳು ಅಗತ್ಯವಾಗುತ್ತಾರೆ,ಅಂದರೆ ಸುಮಾರು 700 ಪೈಲಟ್‌ಗಳು ಬೇಕಾಗುತ್ತಾರೆ. ವಾಯುಪಡೆ ಮತ್ತು ನೌಕಾಪಡೆಯ ಕೆಲವು ನಿವೃತ್ತ ಪೈಲಟ್‌ಗಳ ಸೇವೆಯನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದರು.

ಒಟ್ಟು 9,000 ಪೈಲಟ್‌ಗಳ ಪೈಕಿ ಅರ್ಧದಷ್ಟು ಕಮಾಂಡರ್ ದರ್ಜೆಯವರಾಗಿದ್ದು,ಉಳಿದವರು ಇತರ ವರ್ಗಗಳಿಗೆ ಸೇರಿದ್ದಾರೆ. ಕೆಲವು ವರ್ಗಗಳಲ್ಲಿ ನಮಗೆ ವಿದೇಶಿ ಪೈಲಟ್‌ಗಳು ಅಗತ್ಯವಾಗುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News