ಅಭಿವೃದ್ಧಿ ಹೊಂದಿದ ದೇಶಗಳು ಪರಿಸರಕ್ಕಾಗಿ ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿಲ್ಲ: ಚೀನಾ ಆರೋಪ

Update: 2019-11-27 14:03 GMT

ಬೀಜಿಂಗ್, ನ. 27: ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳು ಜಾಗತಿಕ ತಾಪಮಾನವನ್ನು ತಡೆಯಲು ಏನೂ ಮಾಡುತ್ತಿಲ್ಲ ಎಂದು ಚೀನಾ ಬುಧವಾರ ಆರೋಪಿಸಿದೆ.

ಪರಿಸರ ಪರಿಹಾರ ಸೇರಿದಂತೆ ವಿವಾದಾಸ್ಪದ ವಿಷಯಗಳ ಬಗ್ಗೆ ಚರ್ಚಿಸಲು ಏರ್ಪಡಿಸಲಾದ ವಿಶ್ವಸಂಸ್ಥೆಯ ಪರಿಸರ ಶೃಂಗ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಚೀನಾ ಈ ಹೇಳಿಕೆ ನೀಡಿದೆ.

ಚೀನಾವು ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿದೆ ಹಾಗೂ ಅತಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಹೊರಸೂಸುವ ದೇಶವಾಗಿದೆ. ಆದರೆ, ಅಂತರ್‌ರಾಷ್ಟ್ರೀಯ ಪರಿಸರ ಬದ್ಧತೆಗಳನ್ನು ನಿಭಾಯಿಸುವ ವಿಷಯದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ನಾಯಕತ್ವ ವಹಿಸಬೇಕು ಎಂಬುದಾಗಿ ಪ್ರತಿಪಾದಿಸುತ್ತಾ ಬಂದಿದೆ.

‘‘ಬೆಂಬಲ ಒದಗಿಸಲು ಅಭಿವೃದ್ಧಿ ಹೊಂದಿದ ದೇಶಗಳ ರಾಜಕೀಯ ಅನಾಸಕ್ತಿಯು ಪ್ರಸಕ್ತ ಅಂತರ್‌ರಾಷ್ಟ್ರೀಯ ಪರಿಸರ ಪ್ರಯತ್ನಗಳು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ’’ ಎಂದು ಚೀನಾದ ಪರಿಸರ ಖಾತೆಯ ಉಪ ಸಚಿವ ಝಾವೊ ಯಿಂಗ್‌ಮಿನ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News