2024ರ ಒಳಗೆ 'ಅಕ್ರಮ ವಲಸಿಗರ' ಉಚ್ಛಾಟನೆ: ಅಮಿತ್ ಶಾ

Update: 2019-12-02 17:01 GMT

ಹೊಸದಿಲ್ಲಿ, ನ. 2: ರಾಷ್ಟ್ರೀಯ ಪೌರತ್ವ ನೋಂದಣಿಯ ರಾಷ್ಟ್ರವ್ಯಾಪಿ ಅನುಷ್ಠಾನಕ್ಕೆ ಮೊದಲ ಬಾರಿಗೆ ಅಂತಿಮ ಗಡು ನಿಗದಿಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮುನ್ನ 'ಅಕ್ರಮ ವಲಸಿಗ'ರನ್ನು ಸರಕಾರ ಹೊರದಬ್ಬಲಿದೆ ಎಂದು ಸೋಮವಾರ ಹೇಳಿದ್ದಾರೆ.

''ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶದಾದ್ಯಂತ ಅನುಷ್ಠಾನಗೊಳಿಸಲಾಗುವುದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಎಲ್ಲ ಒಳನುಸುಳುವಿಕೆಯನ್ನು ಗುರುತಿಸಲಾಗಿದೆ ಹಾಗೂ 2024ರ ಲೋಕಸಭಾ ಚುನಾವಣೆ ಒಳಗೆ ನುಸುಳುಕೋರರನ್ನು ಹೊರದಬ್ಬಲಾಗುವುದು'' ಎಂದು ಎರಡನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಂದರ್ಭ ಅವರು ಹೇಳಿದರು.

ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸುತ್ತಿರುವ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ಒಳನುಸುಳುಕೋರರಲ್ಲಿ ರಾಹುಲ್ ಗಾಂಧಿ ಅವರ ಸಂಬಂಧಿಕರು ಇದ್ದಾರಾ ? ಎಂದು ಪ್ರಶ್ನಿಸಿದ್ದಾರೆ.

''ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಯಾಕೆ ಅನುಷ್ಠಾನಗೊಳಿಸುತ್ತೀರಿ ? ಒಳನುಸುಳುಕೋರರನ್ನು ಯಾಕೆ ಹೊರದಬ್ಬುತ್ತೀರಿ ? ಅವರು ಎಲ್ಲಿಗೆ ಹೋಗಬೇಕು ? ಎಂದು ರಾಹುಲ್ ಗಾಂಧಿ ಪ್ರಶ್ನಿಸುತ್ತಿದ್ದಾರೆ. ಅವರೇನು ಒಳನುಸುಳುಕೋರರ ಸಂಬಂಧಿಕರೇ ? 2024ರ ಒಳಗೆ ಬಿಜೆಪಿ ಸರಕಾರ ದೇಶದ ಒಳಗಿರುವ ಪ್ರತಿಯೊಬ್ಬ ನುಸುಳುಕೋರರನ್ನು ಹೊರದಬ್ಬಲಿದೆ'' ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News