ಜೂನಿಯರ್ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್; ಮೇಘಾಲಯ ಚಾಂಪಿಯನ್

Update: 2019-12-03 18:12 GMT

ಕಲ್ಯಾಣಿ, ಡಿ.3: ಪಶ್ಚಿಮ ಬಂಗಾಳದ ಕಲ್ಯಾಣಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸಬ್ ಜೂನಿಯರ್ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅರುಣಾಚಲ ಪ್ರದೇಶವನ್ನು 3-0 ಗೋಲುಗಳಿಂದ ಸೋಲಿಸಿದ ಮೇಘಾಲಯ 2019-20 ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅರುಣಾಚಲ ಪ್ರದೇಶ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಒಡಿಶಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಅನುಭವಿಸಿತ್ತು. ಈ ಬಾರಿ ತಮ್ಮ ನೆರೆಯ ರಾಜ್ಯ ಮೇಘಾಲಯಕ್ಕೆ ಶರಾಣಾಗಿದೆ.

52 ನೇ ನಿಮಿಷದಲ್ಲಿ ಮೇಘಾಲಯದ ಸ್ಯಾಮ್‌ಚಾರ್‌ಫರಾಂಗ್ ತಂಡದ ಗೋಲು ಖಾತೆ ತೆರೆದರು. ಅಂತಿಮವಾಗಿ ಸ್ಯಾಮ್‌ಲಾಂಗ್ ರಿಂಪೈ (90 + 4 ನಿ.) ಮತ್ತು ಟೀಬೊಕ್ ನೊಂಗ್ರಮ್ (90 + 5 ನಿ.) ತಂಡಕ್ಕೆ 3-0 ಮುನ್ನಡೆ ಸಾಧಿಸಲು ನೆರವಾದರು. ಇದರೊಂದಿಗೆ ಮೇಘಾಲಯ ಗೆಲುವಿನ ನಗೆ ಬೀರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News