ಕಸಾಯಿಖಾನೆಗಳಿಗೆ ಸಬ್ಸಿಡಿಯಲ್ಲಿ ಮೋದಿ ಸರಕಾರ ಮುಂದು: ಯುಪಿಎಗಿಂತ 33 ಶೇ. ಹೆಚ್ಚಳ

Update: 2019-12-05 11:09 GMT
Photo: scroll.in

ಹೊಸದಿಲ್ಲಿ: ಕಸಾಯಿಖಾನೆಗಳಿಗೆ ಅಧಿಕ ಸಬ್ಸಿಡಿ ನೀಡಿದ ಬಗ್ಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ 2014ರಲ್ಲಿ ನರೇಂದ್ರ ಮೋದಿಯವರು, ಅಂದು ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ ಆಹಾರ ಸಂಸ್ಕರಣೆ ಕೈಗಾರಿಕೆಗಳ ಸಚಿವಾಲಯ, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದ ಪ್ರಕಾರ, ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕಸಾಯಿಖಾನೆಗಳಿಗೆ ನೀಡಿದ ಸಬ್ಸಿಡಿ ಶೇಕಡ 33ರಷ್ಟು ಹೆಚ್ಚಳವಾಗಿರುವುದನ್ನು ಬಹಿರಂಗಪಡಿಸಿದೆ.

"ಈ ದೇಶಕ್ಕೆ ಹಸಿರು ಕ್ರಾಂತಿ ಬೇಕು. ಆದರೆ ಇದೀಗ ಕೇಂದ್ರ ಸರ್ಕಾರ ಪಿಂಕ್ ರೆವಲ್ಯೂಶನ್‍ಗೆ ಮುಂದಾಗಿದೆ. ಅಂದರೆ ಏನರ್ಥ ಗೊತ್ತೇ? ಪ್ರಾಣಿಗಳನ್ನು ವಧಿಸಲಾಗುತ್ತಿದೆ. ಅವುಗಳ ಮಾಂಸದ ಬಣ್ಣ ತಿಳಿಗುಲಾಬಿ" ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿ ವಿವರಿಸಿದ್ದರು.

ಪ್ರಾಣಿಗಳನ್ನು ವಧಿಸಿ ಬಾಂಗ್ಲಾದೇಶಕ್ಕೆ ಒಯ್ಯಲಾಗುತ್ತಿದೆ. ದೆಹಲಿ ಸರಕಾರ ಅವರಿಗೆ ಸಬ್ಸಿಡಿ ನೀಡುತ್ತಿದೆ ಎಂದು ಹೇಳಿದರು. ಆದರೆ ವಾಸ್ತವವಾಗಿ ಎನ್‍ಡಿಎ ಸರ್ಕಾರದ ಅವಧಿಯಲ್ಲಿ 120.925 ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗಿತ್ತು. ಇದು ಯುಪಿಎ-2 ಅಧಿಕಾರಾವಧಿಯಲ್ಲಿ ನೀಡಿದ 91.23 ಕೋಟಿಗಿಂತ ಅಧಿಕ.

ನ್ಯಾಷನಲ್ ಮಿಷಿನ್ ಫಾರ್ ಫುಡ್ ಪ್ರೊಸೆಸಿಂಗ್ ಯೋಜನೆಯಡಿ ಈ ಸಬ್ಸಿಡಿ ನೀಡಲಾಗಿತ್ತಿದೆ ಎಂದು ಆರ್‍ ಟಿಐಗೆ ಉತ್ತರ ದೊರಕಿದೆ.

ಕೃಪೆ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News