ಮೊದಲ ಟ್ವೆಂಟಿ-20 : ಭಾರತದ ಗೆಲುವಿಗೆ 208 ರನ್‌ಗಳ ಸವಾಲು

Update: 2019-12-06 15:28 GMT

ಹೈದರಾಬಾದ್, ಡಿ.6: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವಿಗೆ 208 ರನ್‌ಗಳ ಸವಾಲು ಪಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡ ಶಿಮ್ರ್‌ನ್ ಹೆಟ್ಮೆಯರ್ ಅರ್ಧಶತಕದ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಹೆಟ್ಮೆಯರ್ 56 ರನ್(41ಎ, 2ಬೌ,4ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಎವಿನ್ ಲೆವಿಸ್ 40 ರನ್(17ಎ, 3ಬೌ,4ಸಿ) ಗಳಿಸಿದರು.

ವೆಸ್ಟ್‌ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 207 ರನ್ ಗಳಿಸಿತು. ವೆಸ್ಟ್‌ಇಂಡೀಸ್ ಮೊದಲ ವಿಕೆಟ್‌ನ್ನು ಬೇಗನೇ ಕಳೆದುಕೊಂಡಿತು. 1.2ನೇ ಓವರ್‌ನಲ್ಲಿ ಲೆಂಡ್ಲ್ ಸಿಮೊನ್ಸ್ ಅವರು ಕೇವಲ 2 ರನ್ ಗಳಿಸಿ ದೀಪಕ್ ಚಹರ್ ಎಸೆತದಲ್ಲಿ ರೋಹಿತ್ ಶರ್ಮಾರಿಗೆ ಕ್ಯಾಚ್ ನೀಡಿದರು.

ಎರಡನೇ ವಿಕೆಟ್‌ಗೆ ಎವಿನ್ ಲೆವಿಸ್ ಮತ್ತು ಬ್ರೆಂಡನ್ ಕಿಂಗ್ 51 ರನ್‌ಗಳ ಜೊತೆಯಾಟ ನೀಡಿದರು. ಲೆವಿಸ್‌ರನ್ನು ವಾಷಿಂಗ್ಟನ್ ಸುಂದರ್ ಎಲ್ಬಿಡಬ್ಲು ಬಲೆಗೆ ಬೀಳಿಸಿದರು. ಲೆವಿಸ್ 40 ರನ್(17ಎ, 3ಬೌ,4ಸಿ) ಗಳಿಸಿದರು.

ಬ್ರೆಂಡನ್ ಕಿಂಗ್ 31 ರನ್ (23ಎ, 3ಬೌ,1ಸಿ) ಗಳಿಸಿದರು. ಹೆಟ್ಮೆಯರ್ ಮತ್ತು ನಾಯಕ ಕೀರನ್ ಪೊಲಾರ್ಡ್ 4ನೇ ವಿಕೆಟ್‌ಗೆ 71 ರನ್ ಸೇರಿಸಿದರು. ನಾಯಕ ಪೊಲಾರ್ಡ್ 37 ರನ್(19ಎ, 1ಬೌ,4ಸಿ) ಗಳಿಸಿ ಚಹಾಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

6ನೇ ವಿಕೆಟ್‌ಗೆ ಜೇಸನ್ ಹೋಲ್ಡರ್ ಮತ್ತು ದಿನೇಶ್ ರಾಮ್ದಿನ್ ಮುರಿಯದ ಜೊತೆಯಾಟದಲ್ಲಿ 34 ರನ್ ಜಮೆ ಮಾಡಿ ತಂಡದ ಸ್ಕೋರ್‌ನ್ನು 200ರ ಗಡಿ ದಾಟಿಸಿದರು. ಹೋಲ್ಡರ್ ಔಟಾಗದೆ 24 ರನ್(9ಎ, 1ಬೌ,2ಸಿ) ಮತ್ತು ರಾಮ್ದಿನ್ ಔಟಾಗದೆ 11ರನ್(7ಎ, 1ಬೌ) ಗಳಿಸಿದರು.

ಭಾರತದ ಪರ ಯಜುವೇಂದ್ರ ಚಹಾಲ್ 36ಕ್ಕೆ 2 ವಿಕೆಟ್, ವಾಷಿಂಗ್ಟನ್ ಸುಂದರ್ ,ದೀಪಕ್ ಚಹರ್ ಮತ್ತು ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News