ತೆಲಂಗಾಣ ಎನ್‌ಕೌಂಟರ್ ಸರಿಯಲ್ಲ : ಮೇಘಾಲಯ ರಾಜ್ಯಪಾಲ ತಥಾಗತ ರಾಯ್

Update: 2019-12-08 14:36 GMT
Photo: PTI

ಕೋಲ್ಕತಾ, ಡಿ.8: ಎನ್‌ಕೌಂಟರ್ ಅಥವಾ ಕಾಂಗರೂ ಕೋರ್ಟ್(ಕಾನೂನಿಗೆ ಅನುಸಾರವಾಗಿ ನಡೆಯದ ನ್ಯಾಯಾಲಯ)ಗಳನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಮೇಘಾಲಯದ ರಾಜ್ಯಪಾಲ ತಥಾಗತ ರಾಯ್ ಹೇಳಿದ್ದಾರೆ.

ತೆಲಂಗಾಣದಲ್ಲಿ ನಾಲ್ವರು ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿರುವ ಘಟನೆಯ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎನ್‌ಕೌಂಟರ್ ವಿಧಾನ ಅಪರಾಧ ಪ್ರಕರಣಗಳಲ್ಲಿ ನ್ಯಾಯ ವಿತರಣೆಯ ಪ್ರಮಾಣಿತ ಕಾರ್ಯವಿಧಾನವಾಗಲು ಸಾಧ್ಯವಿಲ್ಲ . ಅಪರಾಧ ಎಸಗಿದವರನ್ನು ಬಂಧಿಸಿ, ನ್ಯಾಯಾಲಯದೆದುರು ಹಾಜರುಪಡಿಸಬೇಕು. ಅವರ ವಿರುದ್ಧ ಆರೋಪಪಟ್ಟಿ ದಾಖಲಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ಅವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಬೇಕು ಎಂದು ಹೇಳಿದರು.

 ಆದರೆ ಎಲ್ಲೋ ಬಂಧಿಸಿ ಬಳಿಕ ಅವರನ್ನು ಶೂಟ್ ಮಾಡುವುದು ಸರಿಯಲ್ಲ. ಇಂತಹ ನ್ಯಾಯನಿರ್ಣಯ ವಿಧಾನವನ್ನು ಒಪ್ಪಲಾಗದು ಎಂದು ರಾಯ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News