ರೂ. 2,000 ನೋಟು ರದ್ದತಿ ವದಂತಿ ಬಗ್ಗೆ ಕೇಂದ್ರ ಸಚಿವ ಹೇಳಿದ್ದೇನು?

Update: 2019-12-10 12:11 GMT
ಅನುರಾಗ್ ಠಾಕುರ್

ಹೊಸದಿಲ್ಲಿ: ಕೇಂದ್ರ ಸರಕಾರ ರೂ. 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯಲಿದೆ ಎಂಬ ವರದಿಗಳನ್ನು ಕೇಂದ್ರ ವಿತ್ತ ಸಹಾಯಕ ಸಚಿವ ಅನುರಾಗ್ ಠಾಕುರ್ ಅಲ್ಲಗಳೆದಿದ್ದಾರೆ. "ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ,'' ಎಂದು ಸಚಿವರು ರಾಜ್ಯಸಭೆಯಲ್ಲಿ ರೂ. 2,000 ನೋಟುಗಳನ್ನು ರದ್ದುಗೊಳಿಸಲಾಗುವುದೇ ಎಂಬ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಹೇಳಿದ್ದಾರೆ.

ರೂ. 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದ ನಂತರ ಕಾಳಧನ ಅಧಿಕವಾಗಿದೆ. ಅದನ್ನೂ ರದ್ದುಗೊಳಿಸಿ ನೀವು ರೂ. 1,000 ಮುಖಬೆಲೆಯ ನೋಟುಗಳನ್ನು ಹೊರತರಲಿದ್ದೀರಿ ಎಂಬ ತಪ್ಪು ಅಭಿಪ್ರಾಯವಿದೆ,'' ಎಂದು ಸಮಾಜವಾದಿ ಪಕ್ಷದ ಸಂಸದ ವಿಶಂಭರ್ ಪ್ರಸಾದ್ ನಿಶದ್ ಹೇಳಿದರು.

"ನವೆಂಬರ್ 4, 2016ರಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ರೂ. 17,74,187 ಕೋಟಿ ಆಗಿದ್ದರೆ ಡಿಸೆಂಬರ್ 2, 2019ರಂದು ಈ ಮೊತ್ತ ರೂ. 22,35,648 ಕೋಟಿ ಆಗಿದೆ. ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ವರ್ಷಕ್ಕೆ ಸರಾಸರಿ ಶೇ 14.51ರಷ್ಟು ಅಕ್ಟೋಬರ್ 2014ರಿಂದ 2016 ತನಕ ಏರಿಕೆಯಾಗಿದೆ,'' ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News