×
Ad

ಭಾರತ-ಆಸ್ಟ್ರೇಲಿಯಾ ಪಂದ್ಯ: ವಾಂಖೆಡೆ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳಿಂದ ಸಿಎಎ ವಿರುದ್ಧ ಪ್ರತಿಭಟನೆ

Update: 2020-01-14 22:56 IST
Photo: Twitter 

ಮುಂಬೈ: ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಪಂದ್ಯದ ವೇಳೆ ಬಿಳಿ ಟಿ ಶರ್ಟ್ ಗಳನ್ನು ಧರಿಸಿದ್ದ ವಿದ್ಯಾರ್ಥಿಗಳ ಗುಂಪೊಂದು ಪೌರತ್ವ ಕಾಯ್ದೆಯ ವಿರುದ್ಧ ವಿಶಿಷ್ಟ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ನಡೆಯಬಹುದೆನ್ನುವ ಲೆಕ್ಕಾಚಾರದಿಂದ ಕಪ್ಪು ಬಣ್ಣದ ಬಟ್ಟೆಗಳನ್ನು ಕ್ರೀಡಾಂಗಣದೊಳಕ್ಕೆ ನಿಷೇಧಿಸಲಾಗಿತ್ತಾದರೂ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದ ಈ ವಿದ್ಯಾರ್ಥಿಗಳ ಗುಂಪು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಬಂದು ಪ್ರತಿಭಟನೆ ನಡೆಸುವಲ್ಲಿ ಯಶಸ್ವಿಯಾಯಿತು. 'ನೋ ಸಿಎಎ, ನೋ ಎನ್ ಆರ್ ಸಿ, ನೋ ಎನ್ ಪಿಆರ್' ಎಂದು ಬರೆದಿರುವ ಟಿಶರ್ಟ್ ಗಳನ್ನು ಧರಿಸಿ ವಿದ್ಯಾರ್ಥಿಗಳು ಗಮನಸೆಳೆದರು.

"ಕ್ರಿಕೆಟ್ ಪ್ರೇಮಿಗಳಾದ ಮುಂಬೈನ ವಿದ್ಯಾರ್ಥಿಗಳು ಸಿಎಎ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ಭಾರತದಲ್ಲಿ ಯಾವ ರೀತಿಯ ಮಾನವಹಕ್ಕು ಸಮಸ್ಯೆಗಳು ನಡೆಯುತ್ತಿವೆ ಎನ್ನುವುದನ್ನು ಪ್ರೇಕ್ಷಕರಿಗೆ ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ತಿಳಿಸುವುದು ಅಗತ್ಯವಾಗಿದೆ" ಎಂದು ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ನ ವಿದ್ಯಾರ್ಥಿ ಮತ್ತು ಪ್ರತಿಭಟನೆಯ ಆಯೋಜಕರಲ್ಲೊಬ್ಬರಾದ ಫಹಾದ್ ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News