×
Ad

ತ್ರಿಸೇನಾಪಡೆ ವರಿಷ್ಠರಿಗೆ ಸೇನಾ ಮುಖ್ಯಸ್ಥರ ಮೇಲೆ ವಿಶೇಷ ಅಧಿಕಾರವಿದೆ: ಬಿಪಿನ್ ರಾವತ್

Update: 2020-01-16 19:53 IST

ಹೊಸದಿಲ್ಲಿ,ಜ.16: ತ್ರಿಸೇನಾಪಡೆಗಳ ವರಿಷ್ಠ, ಸಮಾನರಲ್ಲಿ ಮೊದಲಿಗನಾಗಿರುತ್ತಾನೆ ಹಾಗೂ ಕಾರ್ಯಾಚರಣೆಯ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳಲ್ಲಿ ಮೂರೂ ಸೇನಾಪಡೆಗಳ ಮುಖ್ಯಸ್ಥರುಗಳ ಮೇಲೆ ಆತ ಕೆಲವೊಂದು ಅಧಿಕಾರಗಳನ್ನು ಹೊಂದಿರುತ್ತಾನೆ ಎಂದು ಜನರಲ್ ಬಿಪಿನ್ ರಾವತ್ ಗುರುವಾರ ತಿಳಿಸಿದ್ದಾರೆ.

ಭಾರತದ ಪ್ರಪ್ರಥಮ ತ್ರಿಸೇನಾಪಡೆಗಳ ಮಹಾವರಿಷ್ಠನಾಗಿ ಜನರಲ್ ಬಿಪಿನ್ ರಾವತ್ ಅವರು ಜನವರಿ 1ರಂದು ಅಧಿಕಾರ ವಹಿಸಿಕೊಂಡಿದ್ದರು.

ಹೊಸದಿಲ್ಲಿಯಲ್ಲಿ ಗುರುವಾರ ನಡೆದ ‘ರೈಸಿನಾ ಸಂವಾದ 2020’ ಕಾರ್ಯಕ್ರಮದ ಅಂಗವಾಗಿ ನಡೆದ ಸಾಮೂಹಿಕ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘‘ ತ್ರಿಸೇನಾ ಪಡೆ ವರಿಷ್ಠ ಸಮಾನರಲ್ಲಿ ಮೊದಲಿಗರು. ಆದರೆ ಆತ ಕೆಲವೊಂದು ಸ್ಪಷ್ಟವಾದ ಹಾಗೂ ಸವಿವರವಾದ ಹೊಣೆಗಾರಿಕೆಗಳನ್ನು ಹೊಂದಿರುತ್ತಾರೆ. ಆತ ಪ್ರಥಮರಲ್ಲಿ ಮೊದಲಿಗನಾಗಿರುವುದರಿಂದ ಕಾರ್ಯಾಚರಣೆಯ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳಲ್ಲಿ ಮೂರು ಸೇನಾಪಡೆಗಳ ವರಿಷ್ಠರ ಮೇಲೆ ಕೆಲವೊಂದು ಅಧಿಕಾರವನ್ನು ಹೊಂದಿದ್ದಾರೆ’’ ಎಂದು ಜನರಲ್ ರಾವತ್ ಅಭಿಪ್ರಾಯಿಸಿದರು.

“ತ್ರಿಸೇನಾಪಡೆಗಳ ಮಹಾವರಿಷ್ಠರಿಗಾಗಿ ರೂಪಿಸಲಾದ ದೃಢವಾದ ಕಾರ್ಯಚೌಕಟ್ಟಿನಲ್ಲಿ ನಾವು (ಸೇನೆ) ಕಾರ್ಯನಿರ್ವಹಿಸಲು ಸಮರ್ಥರಾಗ ಲಿದ್ದೇವೆಂದು ನಾನು ಭಾವಿಸುತ್ತೇವೆ. ಅಧಿಕಾರದ ಹಂಚಿಕೆಯ ಕುರಿತು ನಾನು ಯಾವುದೇ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ಗ್ರಹಿಸುತ್ತಿಲ್ಲ. ಮೂರು ಸೇನಾಪಡೆಗಳ ಮುಖ್ಯಸ್ಥರ ಜೊತೆ ನಾವು ಮಾತುಕತೆಗಳನ್ನು ನಡೆಸಿದ್ದೇವೆ ಹಾಗೂ ಕಳೆದ 15 ದಿನಗಳಲ್ಲಿ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದೇವೆ’’ ಎಂದು ಅವರು ಹೇಳಿದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News