ಎಫ್‌ಐಎಚ್ ಲೀಗ್ ಭಾರತಕ್ಕೆ ಭರ್ಜರಿ ಜಯ

Update: 2020-01-18 17:06 GMT

ಭುವನೇಶ್ವರ, ಜ.18: ಆತಿಥೇಯ ಭಾರತ ತಂಡ ಎಫ್‌ಐಎಚ್ ಲೀಗ್ ಪಂದ್ಯದಲ್ಲಿ ವಿಶ್ವದ ನಂ.3ನೇ ತಂಡ ನೆದರ್ಲೆಂಡ್‌ನ್ನು 5-2 ಗೋಲುಗಳ ಅಂತರದಿಂದ ಮಣಿಸಿದೆ.

ಇಲ್ಲಿ ಶನಿವಾರ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಟ ಆರಂಭವಾಗಿ 15 ಸೆಕೆಂಡ್‌ನಲ್ಲಿ ಭಾರತ 1-0 ಮುನ್ನಡೆ ಪಡೆಯಿತು. ಮನ್‌ದೀಪ್ ಸಿಂಗ್ ಹಾಗೂ ಗುರ್ಜಂತ್ ಸಿಂಗ್ ಭಾರತಕ್ಕೆ ಅಮೋಘ ಆರಂಭ ನೀಡಿದರು. ರೂಪಿಂದರ್ ಪಾಲ್ ಸಿಂಗ್ ಅವಳಿ ಗೋಲು(11ನೇ ಹಾಗೂ 36ನೇ ನಿಮಿಷ) ಗಳಿಸಿದರು. ಮನ್‌ದೀಪ್ ಸಿಂಗ್(34ನೇ ನಿ.)ಲಲಿತ್ ಉಪಾಧ್ಯಾಯ(46ನೇ ನಿ.)ತಲಾ ಒಂದು ಗೋಲು ಗಳಿಸಿ ತಂಡದ ಭರ್ಜರಿ ಗೆಲುವಿಗೆ ನೆರವಾದರು. ನೆದರ್ಲೆಂಡ್‌ನ ಪರ ಜಾನನ್ಸ್ ಜಿಪ್ 13ನೇ ಹಾಗೂ ಜೆರೊನ್ 28ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳು 2-2ರಿಂದ ಸಮಬಲಗೊಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News